ಭಾರತೀಯ ಸೈನ್ಯ

	ಭಾರತೀಯ ಸೈನ್ಯ: ಭಾರತ ಪರ್ಯಾಯ ದ್ವೀಪದ ವಿಸ್ತಾರ ಭೂಪ್ರದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಸುವ, ಸೈನಿಕರಿಗೆ ವೃತ್ತಿ ತರಬೇತಿ ನೀಡುವ ಮತ್ತು ರಾಷ್ಟ್ರದ ಉಳಿದೆರಡು ರಕ್ಷಣಾ ಪಡೆಗಳ ಜೊತೆ ಸಹಕರಿಸಿ ಹಾಗೂ ಸಹವರ್ತಿಸಿ ರಾಷ್ಟ್ರಕ್ಕೆ ಭದ್ರತೆ ಒದಗಿಸುವ ಭಾರತೀಯ ಭೂಸೈನ್ಯ ರಕ್ಷಣಾ ಪಡೆ (ಇಂಡಿಯನ್ ಆರ್ಮಿ) ನೌಕಾದಳ ಮತ್ತು ವಾಯುಬಲ ಉಳಿದೆರಡು ರಕ್ಷಣಾ ಪಡೆಗಳು ಇವುಗಳ ಕಾರ್ಯ ಕ್ಷೇತ್ರಗಳು ಪ್ರಧಾನವಾಗಿ ಜಲ (ನೌಕಾಬಲ) ಮತ್ತು ಬಾನು (ವಾಯುಬಲ). ಆಯಾ ಬಲಕ್ಕೆ ಒಬ್ಬೊಬ್ಬ ವರಿಷ್ಠ ದಂಡನಾಯಕನಿರುವನು. ಈತನ ಅಧೀನದಲ್ಲಿ ವಿವಿಧ ದರ್ಜೆಗಳ ಯೋಧರಿದ್ದು ಪ್ರತಿಯೊಂದು ಬಲವೂ ಒಂದೊಂದು ಸಂಪೂರ್ಣ ವ್ಯವಸ್ಥೆಯಾಗಿರುವುದು. ರಾಷ್ಟ್ರಾಧ್ಯಕ್ಷರು ಎಲ್ಲ ಬಲಗಳ ಪರಮೋಚ್ಛ ದಂಡನಾಯಕ.

ಐತಿಹಾಸಿಕ ಹಿನ್ನಲೆ: ಭಾರತೀಯ ಸಮರಕಲೆ ವೇದಕಾಲದಷ್ಟು ಹಳೆಯದು. ಶಸ್ತ್ರಾಸ್ತ್ರಗಳ ಉಲ್ಲೇಖ ರಾಮಾಯಣದಲ್ಲಿ ಬರುತ್ತದೆ. ಶರೀರಬಲದಿಂದ ಶಸ್ತ್ರ ಪ್ರಯೋಗಿಸಿದರೆ ಮಂತ್ರ ಬಲವೂ ಕೂಡಿ ಅಸ್ತ್ರ ಪ್ರಯೋಗವಾಗುತ್ತಿತ್ತು. ಚದುರಂಗದಳದಲ್ಲಿ ಮುಂದೆ ಕಾಲಾಳು ಹಿಂದೆ ಅಶ್ವದಳ ಅದರ ಹಿಂದೆ ತರಬೇತಿ ಪಡೆದ ಗಜಸಾಲು ಎಲ್ಲದರ ಹಿಂದೆ ಒಂಟೆ, ಕುದುರೆಗಳನ್ನು ಕಟ್ಟಿದ ಆಯುಧಗಳೂ ಪೂರಕ ಸಾಮಗ್ರಿಗಳೂ ಕೂಡಿದ ರಥಸಾಲು. ರಾಜನೇ ಸೇನೆಯ ಮುಖಂಡನಾಗಿರುತ್ತಿದ್ದ. ಕದನದ ಜಯಾಪಜಯ ನಿರ್ಣಯ ಕಾಲ್ಪಡೆಯು ಶತ್ರುಪಾಳೆಯದ ಆಯಕಟ್ಟಿನ ಪ್ರದೇಶದಲ್ಲಿ ತನ್ನ ಧ್ವಜವನ್ನು ಹಾರಿಸುವುದರ ಮೂಲಕ ಆಗುತ್ತಿತ್ತು. ಇದೇ ಪದ್ಧತಿ ಈಗಲೂ ಮುಂದುವರಿದಿದೆ. ಶಂಖ, ಕೊಂಬು, ಕಹಳೆಗಳನ್ನು ಊದುವ ಮೂಲಕ ಈ ನಿರ್ಣಯವನ್ನು ತಿಳಿಸಲಾಗುತ್ತಿತ್ತು. ಆಗ ಧರ್ಮಯುದ್ಧಗಳೇ ಜಾಸ್ತಿ. ಕಡಿಮೆ ತಪ್ಪುಗಳನ್ನು ಮಾಡುವ ಬಣವೇ ಜಯಿಸುವುದು.

	ಮೌರ್ಯರ ಕಾಲಕ್ಕೆ (ಕ್ರಿ.ಪೂ. 322-188) ಸಮರಕಲೆಯಲ್ಲಿ ಬಹಳ ಸುಧಾರಣೆಗಳಾದುವು. ವಾಯುವ್ಯ ಗಡಿ ನುಗ್ಗಿ ಬಂದ ಅಲೆಕ್ಸಾಂಡರ್ ಪುರೂರವನಿಗೆ ಮಣಿದು ತನ್ನ ದಂಡಯಾತ್ರೆಯಿಂದ ಹಿಮ್ಮೆಟ್ಟಬೇಕಾಯಿತು(ಕ್ರಿ.ಪೂ. 356-323). ಕ್ರಿ.ಪೂ. 26ರ ಹೊತ್ತಿಗೆ ಅಶೋಕಚಕ್ರವರ್ತಿಯು ಭಾರತದ ಮೂರನೇ ಎರಡು ಭಾಗಕ್ಕೆ ಸಮರ್ಥ ಆಡಳಿತಗಾರನಾಗಿದ್ದ. ಅವನ ವೇಗದೂತ ಅಶ್ವದಳವು ಪ್ರಶಂಸೆಗೆ ಪಾತ್ರವಾಗಿತ್ತು. ಗುಪ್ತರ ಕಾಲದಲ್ಲಿ (ಕ್ರಿ.ಶ. 4 - 5ನೇ ಶತಮಾನ) ಮಧ್ಯಏಷ್ಯಾದಿಂದ ನುಗ್ಗಿಬಂದ ಹೂಣರು ಅಂದಿನ ಬಹುಪಾಲು ನಾಗರಿಕತೆಯನ್ನು ನಿರ್ನಾಮದ ಅಂಚಿಗೆ ತಂದರು. ಕ್ರಿ.ಶ. 6ನೆಯ ಶತಮಾನದವರೆಗೆ ಪರಿಸ್ಥಿತಿ ಸುಧಾರಣೆ ಆಗಲೇ ಇಲ್ಲ. 1191ರಲ್ಲಿ ಪೃಥ್ವೀರಾಜ ಚೌಹಾನ್ ಮಹಮ್ಮದ್ ಘೋರಿಯನ್ನು ದೆಹಲಿಯಿಂದ 135 ಕಿ.ಮೀ. ದೂರದಲ್ಲಿ ಸೋಲಿಸುವ ಮೂಲಕ ಹೊಸ ಯುದ್ಧನೀತಿಗೆ ಚಾಲನೆ ಕೊಟ್ಟರೂ ಮುಂದಿನ ವರ್ಷ ಅದೇ ಘೋರಿ ಅವನ ಹೆಚ್ಚಿನ ಸಂಪತ್ತನ್ನು ಗೆದ್ದುಕೊಂಡ. ಅಂದು ಆತ್ಮರಕ್ಷಣೆಯೇ ಮುಖ್ಯವಾಗಿತ್ತು. ಆಕ್ರಮಣ ನೀತಿ ಇರಲಿಲ್ಲ. ಹೊಸ ವಿಧಾನಗಳನ್ನು ಕೌಶಲಗಳನ್ನು ಕಲಿಯಲು ಪ್ರಯತ್ನಿಸಲಿಲ್ಲ. ಅರಬ್ಬರೂ ಆಫ್ಘನ್ನರೂ ತುರ್ಕರೂ ಭಾರತದೊಳಕ್ಕೆ ನುಗ್ಗಿ ಸುಧಾರಿಸಿಕೊಂಡರು. ಘೋರಿ, ಘಜ್ನಿ ಮಹಮದರು ಲೂಟಿಯ ತಂತ್ರವನ್ನಷ್ಟೇ ಹೂಡಿದರೆ 1206ಕ್ಕೆ ಬಂದ ಸುಲ್ತಾನರು ದೆಹಲಿಯ ಗದ್ದುಗೆಯನ್ನು ಗೆದ್ದರು. 1526ರ ವೇಳೆಗೆ ತಂತ್ರಯುದ್ಧ ಪ್ರಾರಂಭವಾಯಿತು. ಧೈರ್ಯಸಾಹಸಗಳನ್ನು ಬದಿಗೊತ್ತಿ ಹೇಗಾದರೂ ಜಯಿಸಬೇಕು ಎಂದಾಗಿತ್ತು. 14ನೇ ಶತಮಾನದ ಪ್ರಾರಂಭಕ್ಕೆ ಬೆಂಕಿಯನ್ನು ಅವಲಂಬಿಸಿದ ಶಸ್ತ್ರಗಳ ಬಳಕೆಯಾಯಿತು. 1526ರಲ್ಲಿ ಮೊಗಲರ ಬಾಬರನ ಆಗಮನದಿಂದ ಬಿಲ್ಲುಗಾರರು ಮತ್ತು ಪದಾತಿ ಪಡೆಗಳಿಗೆ ಪ್ರಾಮುಖ್ಯ ಹೆಚ್ಚಿತು. ಅಶ್ವದಳ, ಗದಾಪ್ರಹಾರಿಗಳು, ಒಂದೇ ಕಾಲಕ್ಕೆ ಮೂರೂ ದಿಕ್ಕುಗಳಲ್ಲಿ ಯುದ್ಧಮಾಡಬಲ್ಲ ವ್ಯೂಹರಚನೆಗಳು ಇವರಿಂದ ಪ್ರಾರಂಭವಾಯಿತು. ಲೋಧಿ ಸುಲ್ತಾನ ಸುಲಭವಾಗಿ ಶರಣಾಗತನಾದ. ಗಾಡಿಗಳಲ್ಲಿ ಪೂರಕಸಾಮಗ್ರಿಗಳು ಒದಗಿ ಬರುತ್ತಿದ್ದುವು. ಬಂದೂಕುಗಳ ಕೈಚಳಕ, ಅಶ್ವಾರೋಹಿ ಪಡೆಗಳಿಗೆ ಪ್ರಾಮುಖ್ಯವಿದ್ದು ಕಡಿಮೆ ಸೈನ್ಯ ಕೂಡ ಹೆಚ್ಚು ವಿಸ್ತಾರ ಪ್ರದೇಶಗಳನ್ನು ಆಕ್ರಮಿಸುವಷ್ಟು ಕೌಶಲ್ಯ ಪಡೆದಿತ್ತು. ಆನೆಪಡೆಗೆ ಒಂದು ಕೇಂದ್ರ, ಸೈನ್ಯಕ್ಕೆ ಒಂದು ಕೇಂದ್ರ ಸ್ಥಾಪಿತವಾದುವು. ಹೆಚ್ಚಿನ ಸೈನ್ಯವನ್ನು ಸಾಮಂತರಿಂದ ಪಡೆದುಕೊಳ್ಳುತ್ತಿದ್ದರು. ಪೀರ್ ಅಂದಾಜಿನಿಂದ ಹಿಡಿದು ಮನ್‍ಸಾಬ್‍ದಾರನವರಿಗೆ ಅನೇಕ ಶ್ರೇಣಿಯ ಅಧಿಕಾರಿಗಳಿದ್ದರು. ಅವರ ತರಬೇತಿಗಳಲ್ಲಿ ವ್ಯತ್ಯಾಸಗಳಿದ್ದುವು.

	ಶಿವಾಜಿಯ ಕಾಲಕ್ಕೆ ಪಶ್ಚಿಮ ಘಟ್ಟಗಳ ಸಾಲುಗಳೂ ಅಲ್ಲಲ್ಲಿ ಸ್ಥಾಪಿಸಿದ್ದ ಕೋಟೆಗಳ ಜಾಲವೂ ಇದ್ದು ಒಳನುಗ್ಗಿ ಗದ್ದಲವೆಬ್ಬಿಸಿ ಪಾರಾಗುವ ಕಲೆಯನ್ನು ಸೈನ್ಯಕ್ಕೆ ಕಲಿಸಿಕೊಡಲಾಗಿತ್ತು. ಅವರ ಅಶ್ವಗಳು ಬೆಟ್ಟಗುಡ್ಡಗಳಲ್ಲಿ ಸಲೀಸಾಗಿ ಯುದ್ಧ ಮಾಡಬಲ್ಲವಾಗಿದ್ದುವು. ಶಿವಾಜಿಯ ದಂಡನಾಯಕ ತಾನಾಜಿಯು ಸಿಂಹಘಡ ಯುದ್ಧದಲ್ಲಿ ಮಡಿದ. ಅವನು ಹೇಳಿದ ಕೊನೆಯ ಮಾತು "ಸಿಂಹ್ ಗೇಲೇ ಘಡ್ ಆಲೇ", ಸಿಂಹ ಸತ್ತಿತ್ತು; ಕೋಟೆ ದಕ್ಕಿತು.
ಬ್ರಿಟಿಷರ ಕಾಲ : 	ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಆತ್ಮರಕ್ಷಣೆಗೆ ಸಣ್ಣ ತುಕಡಿಗಳನ್ನು ಮಾಡಿಕೊಂಡರು. ಸ್ಥಳೀಯ ರಾಜಕೀಯ ಅಸ್ಥಿರತೆಯನ್ನು ಉಪಯೋಗ ಮಾಡಿಕೊಂಡು ವ್ಯಾಪಾರದ ಜೊತೆಗೆ ತಮ್ಮ ಹಿಡಿತವನ್ನು ಸಾಧಿಸಿದರು. ಔರಂಗಜೇಬನ ಪತನಾನಂತರ ಎರಡು ಸಮಸ್ಯೆಗಳು ಎದುರಾದುವು. 1. ಆಗಲೇ ಭಾರತದಲ್ಲಿದ್ದ ಇತರ ಯೂರೋಪಿಯನ್ನರನ್ನು ಹೊರಗಟ್ಟುವುದು. ಮುಖ್ಯವಾಗಿ ಫ್ರೆಂಚರ ಪ್ರಭಾವವನ್ನು ಮೊಟಕುಗೊಳಿಸುವುದು. 2. ಮೊಗಲರ ಕ್ಷೀಣ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದು. ಒಳಸಂಚು, ಬೆನ್ನ ಹಿಂದೆ ಇರಿಯುವುದು ಮುಂತಾದವುಗಳಲ್ಲಿ ಬ್ರಿಟಿಷರನ್ನು ಮೀರಿಸಿದವರಿಲ್ಲ. ಅವರಲ್ಲಿ ತಾಂತ್ರಿಕತೆ ಮುಂದುವರಿದಿತ್ತು. ಅವರಿಗೆ ನೌಕಾಪಡೆಯಲ್ಲಿ ಹೆಚ್ಚಿನ ಪರಿಶ್ರಮವೂ ಇತ್ತು. ಅವರ ಅನೇಕ ನೌಕೆಗಳೂ ದೊಡ್ಡವಾಗಿದ್ದುವು. ಆದ್ದರಿಂದ ಅನೇಕ ವರ್ಷಗಳಿಂದ ತಳವೂರಿದ್ದ ಫ್ರೆಂಚರನ್ನು ಸುಲಭವಾಗಿ ಓಡಿಸಲು ಸಾಧ್ಯವಾಯಿತು. ಅವರಿಗೆ ಬಲವಾದ ಎದುರಾಳಿಯೆಂದರೆ ದಕ್ಷಿಣದ ಹೈದರಾಲಿ ಮತ್ತು ಟಿಪ್ಪೂಸುಲ್ತಾನ್ ಮಾತ್ರ.

	ಮುಂಬಯಿ, ಮದರಾಸು, ಕಲ್ಕತ್ತಾಗಳ ವ್ಯಾಪಾರೀಕೇಂದ್ರಗಳು ನೌಕಾನೆಲೆಗಳಾಗಿ ಪರಿವರ್ತನೆಗೊಂಡುವು. 1757ರ ಪ್ಲಾಸೀ ಕದನದೊಂದಿಗೆ, ಮೀರ್‍ಜಾಫರ್ ರಾಬರ್ಟ್ ಕ್ಲೈವ್ ಜೊತೆ ಸೇರಿಕೊಳ್ಳುವುದರ ಮೂಲಕ ನವಾಬ ಸಿರಾಜುದ್ದೌಲ ರಾಜ್ಯವನ್ನು ಕಳೆದುಕೊಂಡನು. ಸಿಖ್ಖರ ವಿರುದ್ಧ 1846 ಮತ್ತು 1849ರ ಸೊಬ್ರಾಓನ್ ಮತ್ತು ಚಿಲಿಯನ್ವಾಲಾ ಕದನಗಳು ಗಂಗಾ ಮತ್ತು ಸಿಂಧೂ ನದೀ ಪಾತ್ರಗಳಲ್ಲಿ ಅವರು ಹೆಜ್ಜೆಯೂರಲು ಅನುಕೂಲವಾದುವು. ಅದೂ ಭಾರತೀಯರನ್ನೇ ಸೇರಿಸಿಕೊಂಡು ಕಟ್ಟಿದ ಸೈನ್ಯದಿಂದ ! ಸ್ಫೋಟಕಗಳನ್ನು ಹೆಚ್ಚು ಬಳಸದೆ ಸ್ಥಳೀಯವಾಗಿ ದೊರಕುತ್ತಿದ್ದ ಸೌಲಭ್ಯಗಳನ್ನೇ ಬಳಸಿಕೊಂಡರು. ಅದರಿಂದ ಕಂಪೆನಿಯು ಬ್ರಿಟಿಷರಿಗೆ ಕೊಡುತ್ತಿದ್ದ ಬಾಡಿಗೆ ಉಳಿಯಿತು. ಹೀಗೆ ಅತಿ ಕಡಿಮೆ ಸಂಬಳದಿಂದ ಪ್ರಾರಂಭವಾದ "ಇಂಡಿಯನ್ ಆರ್ಮಿ" ಈವರೆಗೆ ಮುಂದುವರಿಯಿತು. ಆ ಸಿಬ್ಬಂದಿಗೆ ಬೇರೆ ಯಾವ ಉದ್ಯೋಗವೂ ಬರುತ್ತಿರಲಿಲ್ಲ.
	1. ಹಳೆಯ ತುಕಡಿಗಳು ಮೊದಲಿನಿಂದಲೂ ನೀತಿಯನ್ನು ಕಾಪಾಡಿಕೊಂಡು ಬಂದುವು.
	2. ಸಂಪನ್ಮೂಲಗಳ ಕೊರತೆಯಿದ್ದಾಗಲೂ ಅವರು ನವೋತ್ಸಾಹದಿಂದ ಪ್ರಪಂಚ ಶಕ್ತಿಗಳ ಸರಿಸಮ ಹೋರಾಡಿದರು.

	ಆಂಗ್ಲ ಸೈನ್ಯದ ಕಮಾಂಡ್ ಮತ್ತಿತರ ಮೇಲಧಿಕಾರಿಗಳು ಪರಿಣಮಕಾರಿಯಾಗಿರಲಿಲ್ಲ. ಕಾಲಕ್ಕೆ ತಕ್ಕಂತೆ ವ್ಯೂಹರಚನೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಿಲ್ಲ. ಸ್ಥಳೀಯ ಜನರನ್ನೇ ಬಾಡಿಗೆ ಬಂಟರನ್ನಾಗಿ ನೇಮಿಸಿಕೊಳ್ಳುತ್ತಿದ್ದರು 1683ರಲ್ಲಿ 100 ಜನರಿದ್ದ ರಜಪೂತ ಕಂಪೆನಿಯನ್ನು ಮುಂಬಯಿಯಲ್ಲಿ ಪ್ರಾರಂಭಿಸಲಾಯಿತು. ಅನಂತರ ಬಂಗಾಳ, ಮದರಾಸುಗಳಲ್ಲೂ ಬುಕ್ಸಾರ್ ಮತ್ತು ತೆಲಂಗಾಣಾದ ಜನರನ್ನು ಸೇರಿಸಿಕೊಂಡರು. 1757ರ ಅನಂತರ ರಾಬರ್ಟ್ ಕ್ಲೈವ್ ಯೂರೋಪ್ ಮಾದರಿಯಲ್ಲಿ ತನ್ನ ಸೈನ್ಯವನ್ನು ಪುನರ್‍ವಿಂಗಡಿಸಿದ. ಪ್ರತಿ ಹೆಡ್‍ಕ್ವಾರ್ಟರ್‍ಗಳಲ್ಲಿ 10 ಕಂಪೆನಿಗಳು ಭಾರತೀಯ ಅಧಿಕಾರಿಗಳ ಕೆಳಗೆ ಕೆಂಪು ಸಮವಸ್ತ್ರ ಧರಿಸಿ ಕೆಲಸ ಮಾಡುತ್ತಿದ್ದುವು. ಕೆಲವು ಬ್ರಿಟಿಷ್ ನಾನ್‍ಕಮೀಷನ್ಡ್ ಅಧಿಕಾರಿಗಳೂ ಇದ್ದರು. ಸುಮಾರು 860 ಹುದ್ದೆಗಳು. ಮೊದಲು ಕಾಲಾಳು ಪಡೆ, ಮತ್ತೆ ಅಶ್ವಪಡೆ, ರಾಜಕಾರಣಗಳ ಹೊರತಾಗಿ ಫಿರಂಗಿದಳಕ್ಕೆ ಹೆಚ್ಚಿನ ಕೆಲಸವೇನೂ ಇರಲಿಲ್ಲ. 1748ರಲ್ಲಿ ಬಾಡಿಗೆ "ಗನ್‍ಲಷ್ಕರ್ಸ್" ನೇಮಕವಾಯಿತು.

	ವಾರನ್ ಹೇಸ್ಟಿಂಗ್ಸ್ ಗವರ್ನರ್ ಜನರಲ್ಲರ ಅಶ್ವಾರೋಹಿ ರಕ್ಷಣಾಪಡೆ ನೇಮಿಸಿದ. 1773ರಲ್ಲಿ ಅದು `ಗವರ್ನರ್ ಜನರಲ್ ರಕ್ಷಣಾ ಪಡೆಯಾಯಿತು. 1774ರಲ್ಲಿ ಆರ್ಕಾಟ್ ನವಾಬ ನಾಲ್ಕು ಅಶ್ವಪಡೆಗಳನ್ನು ಮದರಾಸು ಪ್ರೆಸಿಡೆನ್ಸಿಗೆ ಒಪ್ಪಿಸಿದ. ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯೇ ಅತ್ಯಂತ ಹಳೆಯ ಪಡೆ.

	`ಇಂಡಿಯನ್ ಆರ್ಮಿಯ `ಸಿಪಾಯಿ ಇಂದಿನ `ಜವಾನ್ ಅಥವ `ಸವಾರ್. `ಒಗ್ಗಟ್ಟಿಗಾಗಿ ಮಡಿ' ಇವರ ಧ್ಯೇಯ ವಾಕ್ಯವಾಗಿತ್ತು. ಅವರ `ಇಜ್ಜತ್‍ಗೆ (ಮಾನರಕ್ಷಣೆ) ಯಾವ ಧಕ್ಕೆಯಾಗಬಾರದಿತ್ತು. ಈ ಉರ್ದು ಪದದಲ್ಲಿ ಧರ್ಮ ಮತ್ತು ಉಪ್ಪು ತಿಂದವ ಎಂಬ ಎರಡೂ ಅರ್ಥ ಅಡಗಿತ್ತು. ಯಜಮಾನನ ಗೌರವ ಮುಖ್ಯವಾಗಿತ್ತು. ತನ್ನ ಮತ್ತು ಕುಟುಂಬದ ಕಾರಣಗಳು ಗೌಣವಾಗಿದ್ದುವು. ಇವರಿಗೆ ಮೊದಲ ಸ್ಥಾನ. ಆಮೇಲೆ ಇತರ ರೆಜಿಮೆಂಟುಗಳು, ಧ್ವಜ, ದೇಶ ಇತ್ಯಾದಿ. ಪರಸ್ಪರ ಗೌರವ ಗತ್ತು ಮರ್ಯಾದೆಗಳಿದ್ದ ಈ ಜನರನ್ನೇ ಬ್ರಿಟಿಷ್ ಸರ್ಕಾರವೂ ನೇಮಿಸಿ ಅವರಿಗೆ ಜೂನಿಯರ್ ರ್ಯಾಂಕ್‍ಗಳನ್ನೂ (ಶ್ರೇಣಿ) ಕೊಟ್ಟರು. ಗಿರಿಜನರು ಮಿಲಿಟೆರಿ ಶಿಸ್ತಿಗೆ ಒಳಪಡದ ಕಾರಣ ಅಂಥವರು ಬೇಹುಗಾರಿಕೆ ಮತ್ತು ಗಡಿಭದ್ರತಾ ಪಡೆಗಳಲ್ಲಿ ನೇಮಕವಾದರು.

ಅಶ್ವದಳ : ರಷ್ಯಾದ `ಕೊಸಕ್ಸ್ ಅಥವಾ ವಿಶ್ವಸಂಸ್ಥೆಯ `ಲೈಟ್ ಡ್ರಾಗನ್ಸ್ ಮಾದರಿಯಲ್ಲೇ ಭಾರತದ ಅಶ್ವಪಡೆ ರೂಪಿತವಾಗಿದ್ದು ಭಾರತಾದ್ಯಂತ ಹರಡಿಕೊಂಡಿತು. ಬಾಡಿಗೆ ಶಿಲ್ಲಾದಾರ್ ಪದ್ದತಿಯಿಂದ ಬೆಳೆದು ಅನೇಕ ಕದನಗಳಲ್ಲಿ ಸಾಹಸ ಮೆರೆದದ್ದರಿಂದ ಇವೂ ಬ್ರಿಟಿಷ್ ಸೈನ್ಯಕ್ಕೆ ಸೇರ್ಪಡೆಯಾದುವು. ಮರಾಠಾರಿಸಾಲಾ, ಖಾಲ್ಸಾ ಸೈನ್ಯದ ಹಾಡ್ಸನ್ ಹಾರ್ಸ್‍ಗಳೂ ಸೇರಿ ಕ್ಯಾವಲ್ರಿ, ಲಾನ್ಸರ್ಸ್ ಹೆಸರುಗಳನ್ನು ಪಡೆದುವು.

ದಿ ಸ್ಯಾಪರ್ಸ್ ಅಂಡ್ ಮೈನರ್ಸ್-(ಇಂಜಿನಿಯರ್ಸ್)

	ಯುದ್ಧಕ್ಕೆ ಮುಂಚೆ ಭೂಮಿಯ ಸರ್ವೇಕ್ಷಣೆ (ಮೋಜಣಿ) ಅಗತ್ಯವಾಗಿತ್ತು. ಭೂಭಾಗಗಳನ್ನು ಗುರುತಿಸಿ ನಕಾಶೆಗಳನ್ನು ಸಿದ್ಧಪಡಿಸುವ ಕಾರ್ಯ 1780ಕ್ಕೆ ಪ್ರಾರಂಭವಾಯಿತು. ಅನೇಕ ಕೋಟೆ ಕೊತ್ತಲಗಳಿಂದ ಕೂಡಿದ್ದ ಭೂಭಾಗಗಳನ್ನು ಮುತ್ತಿ ಕಬಳಿಸುವ ಕಾರ್ಯಕ್ಕೆ ಪೂರಕವಾಗಿ ಗುಂಡು ಹಾರಿಸಿ ಕೋಟೆ ಗೋಡೆ ಒಡೆಯುವ ಮತ್ತು ಗುಂಡಿಗಳಲ್ಲಿ ಮದ್ದುಗಳನ್ನು ಮುಚ್ಚಿ ಸಿಡಿಸುವ ತುಕಡಿ ಈ ಹೆಸರಿನಿಂದ ಕೆಲಸಮಾಡಿತು. ಈ ಪಡೆಯನ್ನು ಇಂದು ಇಂಜಿನಿಯರ್ಸ್ ಎಂಬ ಹೆಸರಿನಿಂದ ಕರೆಯುತ್ತೇವೆ. 1920ಕ್ಕೆ ಕೋರ್ ಆಫ್ ಸಿಗ್ನಲ್ಸ್ ಅಸ್ತಿತ್ವಕ್ಕೆ ಬಂತು. 1943ಕ್ಕೆ ಪೂರೈಕೆ, ಸಾಗಣೆ ವಿಭಾಗ, ಪಶುವೈದ್ಯಶಾಖೆ, ಶಸ್ತ್ರಾಸ್ತ್ರಗಳು ಒಂದುಗೂಡಿ "ಇಂಡಿಯನ್ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ಸಂಸ್ಥೆ" ಉದಯವಾಯಿತು. ರಾಜಕೀಯ ಒತ್ತಡಗಳ ಫಲವಾಗಿ ಸೈನ್ಯದಲ್ಲಿ ಭಾರತೀಯತೆ ತಲೆಹಾಕಿತು (1920). 1-10-1932ರಂದು ಡೆಹ್ರಾಡೂನ್‍ನಲ್ಲಿ "ಇಂಡಿಯನ್ ಮಿಲಿಟೆರಿ ಅಕಾಡೆಮಿ" ಸ್ಥಾಪಿತವಾಯಿತು. ಅದರ ಮೂರು ಉದ್ದೇಶಗಳು
	1. ದೇಶರಕ್ಷಣೆ, ಗೌರವ, ಕಲ್ಯಾಣ ಮೊದಲು
	2. ಸಿಬ್ಬಂದಿಯ ಗೌರವ, ರಕ್ಷಣೆ, ಕಲ್ಯಾಣಕ್ಕೆ ಎರಡನೇ ಸ್ಥಾನ
	3. ಸ್ವಂತ ಸೌಖ್ಯ, ವಿಶ್ರಾಂತಿ, ರಕ್ಷಣೆಗಳು ಕೊನೆಯದು

ತರಬೇತಿ ಪಡೆದ ಮೊದಲ ಅಧಿಕಾರಿಗಳು 1934 ಡಿಸೆಂಬರ್‍ನಲ್ಲಿ ಹೊರಬಂದರು. ಎಂ.ಸಿ. ಸ್ಯಾಂ ಮಾಣೆಕ್‍ಷಾ ಮೊದಲ ಫೀಲ್ಡ್ ಮಾರ್ಷಲ್ ಆದರು. ಅನೇಕ ಹುದ್ದೆಗಳಿಗೆ ಭಾರತೀಯರೇ ನೇಮಕವಾದರು.

ಮೊದಲನೆ ಮಹಾಯುದ್ಧ (1914-18): 	ಪ್ರಾರಂಭದಲ್ಲಿ 1,55,423 ಸೈನಿಕರಿದ್ದು ಯುದ್ಧದ ಕೊನೆಗೆ 5,73,484 ಭಾರತೀಯ ಸೈನಿಕರಿದ್ದರು. ಸಾವು ನೋವುಗಳೆಷ್ಟೋ. ಜಗತ್ತೇ ಮೆಚ್ಚುವ ಹಾಗೆ ಭಾರತೀಯ ಸೈನ್ಯ ಕಾದಾಡಿದೆ. ಅಶ್ವದಳ ಬೆಟ್ಟ ಗುಡ್ಡ ಕೆಸರು ಕಣಿವೆ ಕಂದರಗಳಲ್ಲಿ ಪಾಶ್ಚಾತ್ಯ ಯುದ್ಧಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದೆ. ಪ್ಯಾಲೆಸ್ತೈನ್ ಕದನದಲ್ಲಿ ತುರ್ಕಿಸ್ಥಾನದವರನ್ನು ಸಿನಾಯಿಯಿಂದ ಲೆಬನಾನ್ ಮತ್ತು ಸಿರಿಯಾವರೆಗೆ ಹಿಮ್ಮೆಟ್ಟಿಸಲೂ ಸಾಧ್ಯವಾಯಿತು.

ಎರಡನೆಯ ಮಹಾಯುದ್ಧ (1939-45) :	ವಿಶ್ವಮಾಪನಕ್ಕೆ ಹೋಲಿಸಿದಾಗ ಸಾಕಷ್ಟು ಮಿಷೀನುಗಳು ಇಲ್ಲದೆ ಹೋದರೂ ಜನಬಲದಲ್ಲಿ ಭಾರತದಷ್ಟು ಬೇರಾವ ದೇಶದ ಸೈನ್ಯವೂ ಭಾಗವಹಿಸಲಿಲ್ಲ. 1939ರಲ್ಲಿ 1,89,000ವಿದ್ದ ಬಲ 1945ಕ್ಕೆ 2,64,323ಕ್ಕೆ ಏರಿತ್ತು. ಇಟಲಿಯ ಮತ್ತು ಎರಿಟ್ರಿಯಾ ಮರಳುಗಾಡುಗಳಲ್ಲಿ ಯುದ್ಧ ಮಾಡಿದ್ದಾರೆ. ಮಲಯ, ಸಿಂಗಪುರ ಮತ್ತು ಬರ್ಮಗಳಲ್ಲಿ ಜಪಾನೀಯರ ಎದುರು ಹಿಮ್ಮೆಟ್ಟಿದರೂ ಅನಂತರ ಮಹಾದಂಡನಾಯಕ ಬಿಲ್ ಸ್ಲಿಮ್‍ನ 14ನೇ ತುಕಡಿ ಎದುರು ಹೋರಾಡಿದ ಫಲ ಅವರು ಬರ್ಮ ಮತ್ತು ವಾಯವ್ಯ ಪ್ರದೇಶಗಳನ್ನು ಬಿಟ್ಟುಕೊಡಬೇಕಾಯಿತು. ಆಗ್ನೇಯ ಏಷ್ಯಾದ ಹತ್ತು ಲಕ್ಷ ಸೈನಿಕರ ಪೈಕಿ ಏಳು ಲಕ್ಷ ಜನ ಭಾರತೀಯರೇ ಆಗಿದ್ದರು. ಬಿಲ್‍ಸ್ಲಿಮ್, ಬೆರ್ನಾರ್ಡ್, ರೋಮೆಲ್ ಮೊದಲಾದವರು ಭಾರತ ಸೈನ್ಯವನ್ನು ಹೊಗಳಿದ್ದಾರೆ. ಆನಂತರ ಅನೇಕ ಜ್ಯೂನಿಯರ್ ನಾಯಕರುಗಳು ಬೆಳಕಿಗೆ ಬಂದರು; ಬ್ರಿ|| ಕೆ.ಎಸ್.ತಿಮ್ಮಯ್ಯ, ಮೇ|| ಶ್ರೀಕಂಠ ಕೊರ್ಲ, ಮೇ|| ಎನ್‍ಸಿ.ರಾಲೆ, ಮೇ|| ರಾಜಿವಾಡೆ ಇತ್ಯಾದಿ. ಹೆಮ್ಮೆಯ `ವಿಕ್ಟೋರಿಯಾ ಕ್ರಾಸ್ ಬಹುಮಾನ ಭಾರತೀಯ ಅಧಿಕಾರಿ ಪ್ರೇಮೇಂದ್ರ ಸಿಂಗ್ ಭಗತ್‍ಗೆ ದೊರಕಿತು - 1941 ಜನವರಿ 31ರ ರಾತ್ರಿ ಕಳೆದು ಫೆಬ್ರುವರಿ ಇನ್ನೂ ಪ್ರಾರಂಭವಾಗುವುದರೊಳಗೆ ಬಾಂಬೆ ಸ್ಯಾಪರ್‍ಗಳ 21 ಫೀಲ್ಡ್ ಕಂಪೆನಿಯನ್ನು ಅಬಿಸೀನಿಯಾದ ಗೊಂಡಾರ್‍ನಲ್ಲಿ ಇಟ್ಟುಕೊಂಡು ಹೋರಾಡಿದ್ದಕ್ಕಾಗಿ ದೊರೆತ ಶೌರ್ಯಪ್ರಶಸ್ತಿ ಇದು.

	ನಾಲ್ಕು ಮಹಾಸಮರಗಳು, ಅಂತರಿಕ ದಂಗೆಗಳು, ಸಣ್ಣ ಪುಟ್ಟ ಕಾದಾಟಗಳು ಎಲ್ಲವೂ ಸೇರಿ ನಮ್ಮ ಯೋಧಬಲ ಒಂದು ಸಬಲ ಸಮರಸನ್ನದ್ದ ಸಂಸ್ಥೆಯಾಗಿ ಬೆಳೆದಿದೆ. ಬದಲಾಗುವ ಕಾಲಕ್ಕೆ ತಕ್ಕಂತೆ ಜನರ ಆವಶ್ಯಕತೆಗಳಿಗೂ ಸ್ಪಂದಿಸುವಂಥ ತರಬೇತಿಯನ್ನು ಸಿಬ್ಬಂದಿಗೆ ನೀಡಲಾಗಿದೆ.

	ಸೈನ್ಯದ ಮುಖ್ಯಕಛೇರಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಾರಂಭವಾಯಿತು. ಪ್ರಧಾನ ಅಧಿಕಾರಿಗಳು `ಸೌತ್‍ಬ್ಲಾಕ್ ಕಟ್ಟಡದಲ್ಲಿ ಉಳಿದರು. ಈಚೆಗೆ `ಸೇನಾ ಭವನ ಎಂಬ ಹೊಸಕಟ್ಟಡವನ್ನೂ ಕಟ್ಟಲಾಗಿದೆ. ಕೆಲವು ತುಕಡಿಗಳು ಎರಡನೆಯ ಮಹಾಯುದ್ಧದ ಪಳೆಯುಳಿಕೆಗಳಂತಿರುವ ಬ್ಯಾರಕ್ಕುಗಳಲ್ಲಿಯೇ ಇವೆ. 14-1-1949ರಲ್ಲಿ ನೇಮಕವಾದ "ಕಮಾಂಡರ್-ಇನ್-ಚೀಫ್" ಶ್ರೇಣಿಯನ್ನು 1956ರಲ್ಲಿ `ಚೀಫ್ó ಆಫ್ ಆರ್ಮಿ ಸ್ಟಾ¥sóï ಎಂದು ಬದಲಾಯಿಸಲಾಯಿತು. ಜಿ. ಕೆ.ಎಂ.ಕಾರ್ಯಪ್ಪ ಈ ಹುದ್ದೆಗೆ ನೇಮಕಗೊಂಡು ನಂತರ ಫೀಲ್ಡ್ ಮಾರ್ಷಲ್ ಶ್ರೇಣಿಗೆ ಬಡ್ತಿ ಪಡೆದರು.
 
	1962ರ ಚೀನಾಯುದ್ಧ : ಎಲೆಕ್ಟ್ರಾನಿಕ್ ಮಾಧ್ಯಮಗಳು ಎಷ್ಟೇ ಇರಲಿ, ಅತಿ ಸಮೀಪದಿಂದ ಭೂಮಿಯ ಮೇಲೆ ನಡೆಸುವ ಯುದ್ಧವೇ ನಿರ್ಣಾಯಕವಾದುದು. ಲಕ್ನೋದಿಂದ 1100 ಕಿ.ಮೀ. ದೂರದ ವಾಲಾಂಗ್ ಪ್ರದೇಶದಲ್ಲಿ ಪೂರ್ವವಲಯದ ಸೇನಾಪಡೆಗಳು ಈ ಪ್ರಯೋಗ ಮಾಡಿದ್ದುವು. ಆನಂತರವೇ ಕಲ್ಕತ್ತಾದ ವಿಲಿಯಮ್ ಕೋಟೆಗೆ ಹಿಂತಿರುಗಿದುವು. ಹೊಸದಾಗಿ ರಚಿಸಲಾಗಿದ್ದ ಸೆಂಟ್ರಲ್ ಕಮಾಂಡ್‍ಗೆ ಲಕ್ನೋ ವಶವಾಯಿತು.

1965 ಮತ್ತು 1971ರಲ್ಲಿ ಕಲಿತ ಪಾಠ : ಪಶ್ಚಿಮ ಕಮಾಂಡ್ ವ್ಯಾಪ್ತಿಗೆ ಬರುತ್ತಿದ್ದ ಪ್ರದೇಶಗಳು ಬಹಳ ವಿಸ್ತಾರವಾಗಿದ್ದುವು. ಆದ್ದರಿಂದ ಅದೇ ಮಾದರಿಯಲ್ಲಿ ಸಿಮ್ಲಾ ಮತ್ತು ಬಿಛಿಂಡಾಗಳಲ್ಲಿ ತೆರೆಯಲಾಯಿತು. ಉತ್ತರ ಕಮಾಂಡನ್ನು ಉದಂಪೂರ್‍ನಲ್ಲಿರಿಸಿ ಜಮ್ಮು, ಕಾಶ್ಮೀರ, ಲಡ್ಡಾಕ್‍ಗಳ ಉಸ್ತುವಾರಿ ಕೊಡಲಾಯಿತು. ಪಂಜಾಬ್ ಮತ್ತು ಉತ್ತರ ರಾಜಸ್ಥಾನಗಳ ಉಸ್ತುವಾರಿಯನ್ನು ಪಶ್ಚಿಮ ಕಮಾಂಡಿಗೆ ವಹಿಸಿ ಕೇಂದ್ರವನ್ನು ಸಿಮ್ಲಾದಿಂದ ಚಂಡೀಘಡಕ್ಕೆ ಸ್ಥಳಾಂತರಿಸಲಾಯಿತು. ಆಯಕಟ್ಟಿನ ಸ್ಥಳಗಳಲ್ಲಿ ವ್ಯೂಹಗಳನ್ನು ರಚಿಸಿ ಮಿಲಿಟೆರಿ ದಂಡನಾಯಕರನ್ನು ನೇಮಿಸಲಾಗಿದೆ.

ಸಿಬ್ಬಂದಿ : ಸುಮಾರು 12 ಲಕ್ಷ ಸಿಬ್ಬಂದಿಗೆ ಚೀಫ್ ಆಫ್ ಆರ್ಮಿ ಸ್ಟಾಫ್ ಅವರೇ ಮೇಲಧಿಕಾರಿ. ಅನೇಕ ಪ್ರಧಾನ ಸ್ಟಾಫ್ ಆಫೀಸರುಗಳು (ಪಿ.ಎಸ್.ಓ.) ಇದ್ದಾರೆ. 1960ರ ತನಕ ಮೂರು ನಕ್ಷತ್ರಗಳ ಶ್ರೇಣಿಯ ಒಬ್ಬರೇ ಜನರಲ್ ಇರುತ್ತಿದ್ದರು. ಪಿ.ಎಸ್.ಓ.ಗಳಿಗೆ ಹಳೆಯ ಹೆಸರುಗಳೇ ಇವೆ. ಉದಾಹರಣೆಗೆ ಕ್ವಾರ್ಟರ್ ಮಾಸ್ಟರ್ ಜನರಲ್, ಅಡ್ಜುಡೆಂಟ್ ಜನರಲ್, ಮಿಲಿಟೆರಿ ಸೆಕ್ರೆಟರಿ, ಇಂಜಿನಿಯರ್ ಇನ್ ಚೀಫ್. ಸಿಗ್ನಲ್ ಆಫೀಸರ್ ಇನ್ ಚೀಫ್; ಬ್ರಿಗೇಡ್ ಶ್ರೇಣಿಯ ಜನರಲ್ ಸ್ಟ್ಯಾಫ್ó ಆಫೀಸರ್ ಬ್ರಿಗೇಡ್ ಮೇಜರ್, ಡೆಪ್ಯೂಟಿಗಳು ಇತ್ಯಾದಿ.

ಯುದ್ಧವ್ಯೂಹ ಸೈನಿಕರು-ಕೋರ್ (ಛಿoಡಿಠಿs) : ರಕ್ಷಣಾ ಗುರಿ ಹೊಂದಿದ ಇವು ಅನಧಿಕೃತ "ಹೋಲ್ಡಿಂಗ್" ಪಡೆದಿವೆ. ಮಿಕ್ಕವು `ರಿಸರ್ವ್ ಅನಧಿಕೃತ ಸ್ಟ್ರೈಕ್ ಕೋರ್. ಹೋಲ್ಡಿಂಗ್‍ಗಳು ಆಕ್ರಮಣ ಸಾಮಥ್ರ್ಯವನ್ನು ಹೊಂದಿವೆ. ಕೋರ್‍ನಲ್ಲಿ ಮೂರು ಅಥವಾ ಐದು ಡಿವಿಜನ್ನುಗಳ ಸೈನ್ಯ ಸಾಮಥ್ರ್ಯವನ್ನು ನಿಭಾಯಿಸುವಂತೆ ವಿನ್ಯಾಸಗೊಳಿಸಿರುತ್ತಾರೆ. `ಆರ್ಮಿ ರಿಸರ್ವ್‍ಗಳು ಸಂಖ್ಯೆಯಲ್ಲಿ ಚಿಕ್ಕವಾಗಿದ್ದರೂ ಪ್ರಬಲವಾಗಿವೆ. ವಿಮಾನದ ಹೋರಾಟಗಳು ಅಥವಾ ಪಾರಾಚೂಟ್‍ಗಳನ್ನು ಕೇಂದ್ರೀಕರಿಸಲಾಗಿದೆ. ಈ ಯೋಧರ ಕಾರ್ಯಾಚರಣೆಗೆ ವಾಯುಸೇನೆ (ಇಂಡಿಯನ್ ಏರ್‍ಫೋರ್ಸ್) "ಮೌಂಟ್"ಗಳನ್ನು ಒದಗಿಸುತ್ತದೆ.
ಡಿವಿಜನ್ ಮತ್ತು ಸ್ವತಂತ್ರ ಬ್ರಿಗೇಡ್ ಗ್ರೂಪುಗಳು : ಹಿರಿ, ಕಿರಿ ಶ್ರೇಣಿಯ ಬೇರೆ ಬೇರೆ ತುಕಡಿಗಳು ಶಸ್ತ್ರಾಸ್ತ್ರಗಳನ್ನೂ ಸೇವೆಗಳನ್ನೂ ಬಹುಕಾಲದವರೆಗಿನ ಕಾರ್ಯಾಚರಣೆಗಳಿಗೆ ಹೊಂದಿಸಿಕೊಳ್ಳುತ್ತವೆ. ಇವು ಸಂದರ್ಭಕ್ಕೆ ತಕ್ಕಂತೆ ಆಗುತ್ತವೆ. `ಬ್ರಿಗೇಡ್‍ನ ಸಂಯುಕ್ತ ಶಸ್ತ್ರಾಸ್ತ್ರ ತುಕಡಿಗಳನ್ನು ಹೆಚ್ಚಿಸಲೋ ಮೊಟಕುಗೊಳಿಸಲೋ ಬಹುದು. ಆದರೆ ಲೆಕ್ಕ ಇಡಲು ಕೋಷ್ಟಕಗಳನ್ನು ಒದಗಿಸಲಾಗಿದೆ. ಕೆಲವು ಹೆಸರುಗಳು: ಪರ್ವತ ಡಿವಿಜನ್, ಇನಫೆಂಟ್ರಿ (ಪದಾತಿ), ಸಶಸ್ತ್ರದಳ, ಯಾಂತ್ರಿಕದಳ, ಸ್ವತಂತ್ರ ಬ್ರಿಗೇಡ್ ಯಂತ್ರಗಳು, ರಕ್ಷಣಾ ರಾಕೆಟ್ಸ್, ಗನ್ಸ್ ಪಾರಾಚ್ಯೂಟ್ಸ್ ಇಂಜಿನಿಯರ್ಸ್, ಭೂಸೈನ್ಯ, ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳು, ವ್ಯವಸ್ಥಿತ ಕಾಲಾಳು ಪಡೆ ಇವೆಲ್ಲ ಟಾಸ್ಕ್‍ಫೋರ್ಸ್‍ಗಳಾಗಿ ಉದ್ದೇಶಗಳನ್ನು ಪೂರೈಸುತ್ತವೆ. ಆಹಾರ ಮುಂತಾದ ಪೂರೈಕೆಗಳೂ, ಸಾರಿಗೆ, ಬಿಡಾರ, ಶಸ್ತ್ರಾಸ್ತ್ರಗಳ ಡಿಪೋಗಳು ಔಷಧೋಪಚಾರಗಳೂ ದೊರೆಯುತ್ತವೆ.

	ಭೂಸೈನ್ಯದಲ್ಲಿ ರಚನೆಗಳಲ್ಲಿ ಆಗಾಗ ಬದಲಾವಣೆಯಾಗುತ್ತಲೇ ಇರುತ್ತವೆ. ಆಕ್ರಮಣಗಳ ವೇಳೆ ಹೊಸ ವಿಚಾರಗಳೂ, ತಂತ್ರಜ್ಞಾನಗಳೂ ಸೇರಿಕೊಳ್ಳುತ್ತವೆ. ಹೊಂದಾಣಿಕೆಗಳು ನಡೆಯುತ್ತಲೇ ಇರುತ್ತವೆ. ಎರಡು ಸಲಕ್ಕೂ ಮೇಲ್ಪಟ್ಟು, ಸೈನ್ಯವನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ. ಅಪಾಯಗಳನ್ನು ಎದುರಿಸುವ ತಂತ್ರ, ಆತಂಕಕಾರಿ ಅನನುಕೂಲತೆಗಳನ್ನು ಸಮೀಪದಿಂದ ಮುಂಗಂಡು, ಪ್ರಜ್ಞಾವಂತ ಸಾಮಥ್ರ್ಯದಿಂದ ಜಾಗೃತವಾಗಿದ್ದುಕೊಂಡು ತನ್ನ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳುತ್ತವೆ. ದೇಶ ಏನು ಅನುಕೂಲಗಳನ್ನು ಕೊಟ್ಟಿದೆಯೋ ಅವನ್ನು ಎಂಥಾ ಕಷ್ಟದ ಸಮಯಗಳಲ್ಲೂ ಸಮರ್ಥವಾಗಿ ಬಳಸಿದೆ.
ಯಾಂತ್ರಿಕ ಸುಧಾರಣೆ : ಯಾಂತ್ರಿಕ ಸುಧಾರಣೆಗಳು ಸಾಲದು. ಆಧುನೀಕರಣದ ದೆಸೆಯಿಂದ ಕೆಲವು ಕಾಲ ಮತ್ತು ಅರ್ಥಗಳಲ್ಲಿ ವಿರೋಧಾಭಾಸಗಳು ಕಾಣಬರುತ್ತವೆ.

ಅಂಡರ್‍ಪಿನ್ನಿಂಗ್(ಮೂಲ ಅರ್ಥ ಮೂಲಾಧಾರ) - ಸಮಯದ ಪರಿವೆ ಇಲ್ಲವೆ ಕದನಗಳಲ್ಲಿ ಪರಸ್ಪರ ಹೊಂದಾಣಿಕೆಯಿಂದ ಹೋರಾಡುವ ಧರ್ಮ

ಪಿವಟ್ (ಮೂಲಅರ್ಥ ವ್ಯೂಹದ ಕೇಂದ್ರ). ಫೀಲ್ಡ್‍ಕಮಾಂಡರುಗಳು ಆಡಳಿತದ, ತಾಂತ್ರಿಕ ಅಥವಾ ತಾತ್ವಿಕ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಮತ್ತು ಯುದ್ಧಕೌಶಲದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಲ್ಪನೆಗಳು.
ತಂತ್ರಜ್ಞಾನ ಮತ್ತು ಸಲಕರಣೆಗಳು - (ಟೆಕ್ನಾಲಜಿ ಅಂಡ್ ಎಕ್ವಿಪ್‍ಮೆಂಟ್) ಒಳ್ಳೆಯ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನೂ ವಿದ್ಯುತ್ ಸಂಪರ್ಕಗಳನ್ನೂ ಸಂಯುಕ್ತವಾಗಿ ಸಮರ್ಥವಾಗಿ ಸಹಾಯಕ್ಕೆ ಬಳಸಿಕೊಳ್ಳುವುದು. ಕೇವಲ ಸಂಖ್ಯಾಬಲವನ್ನೇ ನಂಬದೆ ಇರುವುದು.
ಭಾರತಸೈನ್ಯ ಚೆನ್ನಾಗಿ ಸಜ್ಜಾಗಿದ್ದು ದೃಢ ಮನೋದಾಢ್ರ್ಯ ಮತ್ತು ಆಕ್ರಮಣ ಸಾಮಥ್ರ್ಯವನ್ನು ಸದಾ ಉಳಿಸಿಕೊಂಡು ಬಂದಿದೆ. ಟಿ-72 ಬಿ.ಎಂ.ಪಿ ಶ್ರೇಣಿಯ ಇನ್‍ಫೆಂಟ್ರಿ ಕಾಂಬ್ಯಾಟ್ ವಾಹನಗಳು, ಟ್ಯಾಂಕುಗಳನ್ನು ಉರುಳಿಸಬಲ್ಲ ಕ್ಷಿಪಣಿಗಳು ವಾಯುವಿಮಾನಗಳು, ಸರ್ವೇಕ್ಷಣ ವೇಗದೂತಗಳು, ಎಫ್.ಎಚ್. 77/ಬಿ-2 ಮೀಡಿಯಮ್ ಫಿರಂಗಿಗಳ ಸ್ಥಳೀಯವಾಗಿ ತಯಾರಿಸಿದ ಇತರ ಸಲಕರಣೆಗಳು, ಸ್ವಯಂಚಾಲಿತ ವಾಯುರಕ್ಷಣಾಕ್ಷಿಪಣಿ ಗನ್ನುಗಳು, ಬ್ಲಾಕ್ ಎಲೆಕ್ಟ್ರಾನಿಕ್ ಮಂಚಿಕೆಗಳು (ಂಡಿಡಿಚಿಥಿs), ನೆಲ ಮತ್ತು ಜೌಗು ಪ್ರದೇಶಗಳೆರಡರಲ್ಲೂ ಚಲಿಸಬಲ್ಲ ಮೊದಲ ದರ್ಜೆಯ ಆಕ್ರಮಣ ಸೇತುವೆಗಳು ಎಲ್ಲವೂ ಸಹಾಯ ಒದಗಿಸುತ್ತವೆ. ನಾವೇ ದೊಡ್ಡವರು ಎನ್ನುವ ಭಾವನೆಗೆ ಎಡೆಯಿಲ್ಲದಂತೆ ಎಲ್ಲ ತುಕಡಿಗಳೂ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಪರ್ವತ ಶ್ರೇಣಿಗಳಲ್ಲಿ ಸಣ್ಣ ತುಕಡಿಗಳು, ಇಂಜಿನಿಯರ್ಸ್ ಸಿಗ್ನಲ್ ಹೆಲಿಕಾಪ್ಟರ್ ಮತ್ತು ಪ್ರಾಣಿಗಳ ಪಡೆ ಸಹಾಯ ಪಡೆಯುತ್ತವೆ. ಸಿಯಾಚಿನ್ ಕಾಳಗದಲ್ಲಿ ತೀರಾ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಯಿತು. ಎಲ್ಲ ಅನನುಕೂಲತೆಗಳ ಮಧ್ಯೆಯೂ ಸಂಪೂರ್ಣ ಸಜ್ಜಾಗಿರುವಂಥ ಸಮನ್ವಯವು ಇಲ್ಲಿದೆ.

ಎರಡನೆಯ ಸಾಲಿನ ಆತ್ಮರಕ್ಷಣೆ :	ಹಡಗು ಕಟ್ಟೆಗಳು (ಜoಛಿಞs) ಬಂದರುಗಳು, ರೈಲ್ವೆ, ಆಂತರಿಕ ನೌಕಾಯಾನ ಇಂಜಿನಿಯರಿಂಗ್ ವಿಭಾಗಗಳು ಯುದ್ಧಾನಂತರ ತತ್ಸಂಬಂಧದ ನಾಗರಿಕ ಆಡಳಿತ ವಹಿಸಿಕೊಳ್ಳುವವರೆಗೆ ಆಕ್ರಮಿತ ಪ್ರದೇಶಗಳ ಆಡಳಿತವನ್ನು ನಿರ್ವಹಿಸುತ್ತವೆ. ಶಾಲಾ ಕಾಲೇಜುಗಳ ಮಟ್ಟದಲ್ಲಿ ಎನ್.ಸಿ.ಸಿ. ತರಬೇತಿಯನ್ನು ಕೊಡಲಾಗುತ್ತಿದೆ. ರಿಪಬ್ಲಿಕ್ ಡೇ, ಆರ್ಮಿ ಡೇ ಪೆರೇಡುಗಳೂ, ವಿಜಯೋತ್ಸವಗಳೂ ತುಂಬಾ ವರ್ಣರಂಜಿತವಾಗಿರುತ್ತವೆ.
ವಾಲಂಟಿಯರ್ಸ್-ಸ್ವಯಂ ಸೇವಕದಳ :	ಇಲ್ಲಿ ಭರ್ತಿಯಾಗುವುದಕ್ಕೆ ಯಾವ ವಿಶೇಷ ಮಿಲಿಟರಿ ಅರ್ಹತೆಯೂ ಇಲ್ಲ. ಇದಲ್ಲದೆ ಸೇನಾಭರ್ತಿಗೆ ಅವಶ್ಯವಾದ ವಾತಾವರಣವನ್ನು ದೇಶದ ಎಲ್ಲ ಭಾಗಗಳಲ್ಲೂ ಕಲ್ಪಿಸಲಾಗಿದೆ.
ಲೀಡರ್ಸ್ : ಆಫೀಸರ್ ಕೋರ್ ಕಮಾಂಡಿನ ಶೇಕಡಾ 7-8 ಇರುತ್ತದೆ. 1963-65ರಲ್ಲಿ ಮಾತ್ರ "ಷಾರ್ಟ್ ಟರ್ಮ್ ಎಮರ್ಜೆನ್ಸಿ ಕಮಿಷò" ಸ್ಥಾಪಸಿಲಾಯಿತು. ಆ ಅಧಿಕಾರಿಗಳನ್ನು ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ಮಿಲಿಟೆರಿ ಅಕಾಡೆಮಿ, ಆರ್ಮಿ ಕ್ಯಾಡೆಟ್ ಕಾಲೇಜುಗಳಿಂದ ಆಯ್ಕೆ ಮಾಡುತ್ತಾರೆ. ಯುದ್ಧದ ಮುಂಚೂಣಿಗಳಲ್ಲಿ ಅಧಿಕಾರಿಗಳೇ ನಾಯಕತ್ವ ವಹಿಸಿ ಮುಂದೆ ನಿಂತು ನಿರ್ದೇಶಿಸುತ್ತಾರೆ. ಎಲೆಕ್ಟ್ರಾನಿಕ್ ಮತ್ತು ದೂರ ನಿಯಂತ್ರಕಗಳಿಂದ ಮಿಲಿಟೆರಿ ಆದೇಶಗಳು ಬರುವುದಿಲ್ಲ. ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ದೊರೆಯುವ ಶಿಕ್ಷಣ ಅತ್ಯಂತ ಉನ್ನತಮಟ್ಟದ್ದಾಗಿರುವುದು.
ಟೀತ್ ಅಂಡ್ ಟೈಲ್ : ಇದೊಂದು ಗಾದೆಮಾತು. ಸೈನ್ಯದ ಭಾಷೆಯಲ್ಲಿ ಹೆಚ್ಚು ಬಳಕೆಯಲ್ಲಿದೆ. "ಹಲ್ಲು ಬಲವಾಗಿರಬೇಕಾದರೆ, ಬಾಲವೂ ಬಲವಾಗಿಲ್ಲದಿದ್ದರೆ ಹೇಗೆ?". ಪೂರಕ ತುಕಡಿಗಳೂ ಮುಖ್ಯ ಸೈನ್ಯದಷ್ಟೇ ಸಮರ್ಥವಾಗಿವೆ. ಉದಾಹರಣೆಗೆ ಅಂಡರ್ ಪಿನ್ನಿಂಗ್, ಮೆಡಿಕಲ್ ಕೋರ್, ಆರ್ಮಿ ಸರ್ವಿಸಸ್ ಕೋರ್, ಮಿಲಿಟೆರಿ ಪೋಲೀಸರೂ ಇದಕ್ಕೆ ಹೊರತಾಗಿಲ್ಲ.
ಸಾಹಸ ಮತ್ತು ಕ್ರೀಡೆ : ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರರು ನಮ್ಮ ಸೈನ್ಯದಲ್ಲಿದ್ದಾರೆ. ಪರ್ವತಾರೋಹಣ, ಬಂಡೆ ಏರುವುದು, ನೀರಿನ ತೆಪ್ಪಗಳಲ್ಲಿ ಪ್ರಯಾಣ, ಮಂಜುಗಡ್ಡೆಗಳ ಮೇಲೆ ಸ್ಕೀಯಿಂಗ್, ಪಾರಾಚೂಟಿಂಗ್ ಮುಂತಾದ ಕ್ರೀಡೆಗಳು ಅವರಿಗೆ ಅಚ್ಚುಮೆಚ್ಚು.

ಆರ್ಮಿ ಆರ್ಡ್‍ನೆನ್ಸ್ ಕೋರ್ : 15ನೇ ಶತಮಾನದಲ್ಲಿ ಆರಂಭಿಸುವ ಇದು 1882ರಲ್ಲಿ ಸ್ಟೇಟ್ ಆಫ್ ವಾರ್‍ಗೆ ವರ್ಗಾವಣೆಯಾಯಿತು. 1918ರಲ್ಲಿ ವಿಶ್ವಸಮರಾನಂತರ ರಾಯಲ್ ಆರ್ಮಿ ಆರ್ಡ್‍ನೆನ್ಸ್ ಕೋರ್ ಹೆಸರು ಬಂತು. 1922ರಲ್ಲಿ ರಾಯಲ್ ಇಂಡಿಯನ್ ಆದದ್ದು 1950ರಲ್ಲಿ ಇಂಡಿಯನ್ ಆಯಿತು. ಈ ಪಡೆಯ ಧ್ಯೇಯ ವಾಕ್ಯ "ಶತ್ರು ಪಾಳಯದಲ್ಲಿ ಗುಡುಗುವುದು" (ಉಸಾ ತೇಲಾ ತನಂತಿ) 23-1-1978ರಲ್ಲಿ ಈ ವಾಕ್ಯವನ್ನು "ಶಸ್ತ್ರಸೆ ಶಕ್ತಿ" ಎಂದು ಬದಲಾಯಿಸಲಾಯಿತು.

ಧ್ವಜ :	ಪ್ರತಿ ಕೋರ್‍ಗೂ ಒಂದೊಂದು ವರ್ಣರಂಜಿತ ಧ್ವಜ ಇರುವುದು. "ಆಯುಧ್ ಕೋರ್ ಮಹಾನ್" ಎಂಬ ಗೀತೆಯನ್ನು 4ನೇ ಸಮ್ಮೇಳನದಲ್ಲಿ ಪರಿಚಯಿಸಲಾಯಿತು.
ಎಬಿಸಿ ಕ್ರೆಸ್ಟ್-ಬಹುಮಾನಗಳು ಮತ್ತು ಲಾಂಛನಗಳು

	1414-ಬ್ರಿಟಿಷ್ ಬೋರ್ಡ್ ಆಫ್ ಆರ್ಡ್‍ನೆನ್ಸ್ ಇನ್‍ಸಿಗ್ನಿಯ (ಬ್ಯಾಡ್ಜ್)
	1898-ಬಂಗಾಲ ಮದರಾಸು, ಬೊಂಬಾಯಿ, ಪ್ರೆಸಿಡೆನ್ಸಿಗಳನ್ನು ಕೂಡಿಸಿ ಆರ್ಡ್‍ನೆನ್ಸ್ ಡಿಪಾರ್ಟ್‍ಮೆಂಟ್ ಕ್ರೆಸ್ಟ್
1918-ಮೊದಲ ಮಹಾಯುದ್ಧದ ನಂತರ `ರಾಯಲ್ ಪದ ಸೇರ್ಪಡೆ
1922-ಇಂಡಿಯನ್ ಆರ್ಮಿ ಕೋರ್ ನೇಮಕ
1954-ಇಂದಿನ ಕೋರ್ ಸ್ಥಾಪನೆ
1978-ಶಸಸ್ತ್ರ ಶಕ್ತಿ ಧ್ಯೇಯವಾಕ್ಯ
1989-ಇದನ್ನೇ ಹಿಂದಿ ಭಾಷೆಯಲ್ಲಿ ಬರೆಸಲಾಯಿತು

ಕಂಗ್‍ಲ ತೊಂಗ್ಬಿ ಯುದ್ಧ ಸ್ಮಾರಕ

	ಇಂಫಾಲ್ ದಿಮಾಪುರ ರಸ್ತೆಯ 8ನೇ ಮೈಲಿಯಲ್ಲಿರುವ ಕಂಗ್ಲ ತೊಂಗ್ಬಿ ಹಳ್ಳಿಯಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿದೆ. 1944 ಏಪ್ರಿಲ್: 221 ಅಡ್ವಾನ್ಸ್ ಬೇಸ್ ಡಿಪೋದವರು ಜಪಾನ್ ಆಕ್ರಮಣದಲ್ಲಿ ಪ್ರಾಣತ್ಯಾಗ ಮಾಡಿದರೂ ಶಸ್ತ್ರಾಸ್ತ್ರ ಸಂಗ್ರಹವನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದವರ ನೆನಪಿಗೆ ಇದನ್ನು ನಿರ್ಮಿಸಲಾಗಿದೆ (15-4-1946). ಆದರೆ 27-12-1976ರಲ್ಲಿ ಇದನ್ನು ಜಬಲ್‍ಪುರದ ಕಾಲೇಜ್ ಆಫ್ ಮೆಟೀರಿಯಲ್ ಮ್ಯಾನೇಜ್‍ಮೆಂಟ್‍ಗೆ ಸ್ಥಳಾಂತರಿಸಲಾಯಿತು.

ಆರ್ಮಿ ಆರ್ಡ್‍ನೆನ್ಸ್ ಕೋರ್

	ಸೈನ್ಯದ ಆವಶ್ಯಕತೆಗಳನ್ನು ಸಮರ್ಥವಾಗಿ ಪೂರೈಸುವ ಜವಾಬ್ದಾರಿಯನ್ನು ಹೊತ್ತಿದೆ. ವಾಹನಗಳನ್ನು ಒದಗಿಸುವುದು. ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವುದು, ದಾಸ್ತಾನು ಸಮವಸ್ತ್ರ, ಆಯುಧಗಳ ಸರಬರಾಜು, ರಿಪೇರಿ, ಹಳೆಯ ವಾಹನಗಳ ವಿಲೇವಾರಿ- ಬುಲೆಟ್‍ನಿಂದ ಬೋಫೋರ್ಸ್‍ವರೆಗೆ-ಷೆಲ್, ಮಿಸೈಲ್ ಕ್ಷಿಪಣಿಗಳವರೆಗೆ ಸೈನ್ಯದ ಎಲ್ಲ ಆವಶ್ಯಕತೆಗಳನ್ನೂ ಸಮರ್ಥವಾಗಿ ಪೂರೈಸುವುದುರ ಜೊತೆಗೆ ಸುಧಾರಿತ ಸ್ಫೋಟಕಗಳನ್ನು ಸಿಡಿಸುವ ಸಾಧನಗಳ ತರಬೇತಿಯನ್ನು ಇದು ನೀಡುತ್ತದೆ.
ಐಏಒಸಿ ಸೆಂಟರ್

	1947ರ ಜೂನ್‍ತನಕ ಜಬ್ಬಲ್‍ಪುರದ ಎ.ಓ.ಸಿ ಶಾಲೆಯ ಒಂದು ಅಂಗವಾಗಿದ್ದ ಇದನ್ನು ಅನೇಕ ಮಾರ್ಪಾಡುಗಳೊಂದಿಗೆ ಈಗ ಸಿಕಂದರಾಬಾದಿಗೆ ಸ್ಥಳಾಂತರಿಸಿ ಅಲ್ಲಿ ಅನೇಕ ವಿಧವಾದ ತರಬೇತಿಗಳನ್ನೂ ನೀಡಲಾಗುತ್ತದೆ. 8-12-1970ರಂದು ಉಪರಾಷ್ಟ್ರಪತಿ ಜಿ.ಎಸ್. ಪಾಠಕ್‍ರವರು `ಕಲರ್ಸ್ ಗೌರವ ನೀಡಿದರು. ಲಾರ್ಡ್ ವಾರೆನ್ ಹೇಸ್ಟಿಂಗ್ಸ್‍ನ ಖಾಸಗಿ ಸಂಗ್ರಹಾಲಯದಿಂದ ಪ್ರಾರಂಭವಾದ ಈ ವಸ್ತುಸಂಗ್ರಹಾಲಯ 1951ರಲ್ಲಿ ಜಬ್ಬಲ್‍ಪುರಕ್ಕೆ ಸ್ಥಳಾಂತರಿತವಾಯಿತು ಸಮುರಾಯಿ ಕತ್ತಿಗಳಿಂದ ಹಿಡಿದು ಕ್ರಿ.ಶ. 1700ರ ವರೆಗಿನ ಪ್ರದರ್ಶನಗಳ ಜೊತೆ ಅನೇಕ ಯುದ್ಧ ಪಳೆಯುಳಿಕೆಗಳೂ ಇವೆ.
ದೇಶ ವಿಭಜನೆ

	1947 ಆಗಸ್ಟ್ 14ರ ಮಧ್ಯರಾತ್ರಿ ಭಾರತದ ಸ್ವಾತಂತ್ರ್ಯದ ಜೊತೆಗೆ ದೇಶ ವಿಭಜನೆಯೂ ಆಗಿ ಪಾಕಿಸ್ತಾನ ಹುಟ್ಟಿಕೊಂಡಿತು (ಪಂಜಾಬು ಭಾಗಗಳು, ಆಫ್‍ಘಾನಿಸ್ತಾನ, ಕಾಶ್ಮೀರ, ಬಲೂಚಿಸ್ತಾನ, ಇಂಡಿಯಾ ಭಾಗಗಳು). ಬ್ರಿಟನ್ನರು ಅವಸರ ಅವಸರವಾಗಿ ಒಲ್ಲದ ಮನಸ್ಸಿನಿಂದ ಹೋದರು. ಹಳೆಯ ಭಾರತ ಸೈನ್ಯವೂ ಭಾಗವಾಯಿತು. ಜೂನ್ 1947ಕ್ಕೆ ಇದ್ದ ಬಲ 5 ಲಕ್ಷ; 4 ಲಕ್ಷ ಜನ ಮತ್ತು ದೇಶಾದ್ಯಂತ ಇತರ ಚರ ಸ್ತಿರ ಆಸ್ತಿಗಳ ಭಾಗವಾಯಿತು. ಪಂಜಾಬು, ಬಂಗಾಲಗಳಲ್ಲಿ ಸಣ್ಣಪುಟ್ಟ ಗಲಭೆಗಳಾಗಿ ದಂಗೆಯ ಮಟ್ಟಕ್ಕೆ ಏರಿತು. ಇದನ್ನು ಹತ್ತಿಕ್ಕಲು ಪಂಜಾಬು ಗಡಿಪಡೆ ಅಸ್ತಿತ್ವಕ್ಕೆ ಬಂತು. ಇದೊಂದು ಪ್ರತಿಫಲವಿಲ್ಲದ ಕಠಿಣಕ್ರಮ, 575 ಬಿಡಿಬಿಡಿ ರಾಜ್ಯಗಳು ಗಣರಾಜ್ಯಕ್ಕೆ ಸೇರಿಕೊಂಡುವು. ಆದರೆ ಜುನಾಗಡ (ಗುಜರಾತ್) ಹೈದರಾಬಾದು ಕಾಶ್ಮೀರಗಳು ತಲೆನೋವಾದುವು. ಸೈನ್ಯ ಗುಜರಾತು ಹೈದರಾಬಾದುಗಳಲ್ಲಿ ಶಾಂತಿ ಕಾಪಾಡಿತು. ಕಾಶ್ಮೀರ ಜನಾಭಿಪ್ರಾಯ ಪಡೆದು ನಿಧಾನವಾಗಿ ಒಪ್ಪಿತು. 1947ರಲ್ಲಿ ಪಾಕಿಸ್ತಾನದ ಆಕ್ರಮಣಕಾರರು ಕಾಶ್ಮೀರ ಕಣಿವೆಯೊಳಕ್ಕೆ ನುಗ್ಗಿದರು. 1948ರಲ್ಲಿ ನೂರುಗಂಟೆಗಳ ಕಾದಾಟದ ನಂತರ ಮೇಜರ್ ಜನರಲ್ ಐಎನ್‍ಎಸ್ ಚೌಧರಿಯವರ ಮುಂದಾಳತ್ವದಲ್ಲಿ ಹೈದರಾಬಾದು ಮಣಿಯಿತು.

ಕಾಶ್ಮೀರ

	ಪೀರ್‍ಪಂಜಾಲ್ ನೈರುತ್ಯಕ್ಕೆ ಜಮ್ಮು ಇದೆ; ಪರ್ವತಗಳ ಮಧ್ಯೆ ಕಣಿವೆ ಇದೆ. ಉತ್ತರದಲ್ಲಿ ಕಾರಕೋರಮ್ ಮತ್ತು ಹಿಮಾಲಯ ಶ್ರೇಣಿಗಳ ಮಧ್ಯೆ ಗಿಲ್ಗಿಟ್, ಹ್ಟ್ನ್ಸಾ, ಬಾಲ್ಟಿಸಾನ್‍ಗಳೂ ಪೂರ್ವಕ್ಕೆ ಲದ್ದಾಕ್ ಇವೆ. ಸರ್ವಋತು ರಸ್ತೆಯೊಂದು ಪಠಾಣಕೋಟದಿಂದ ಶ್ರೀನಗರದವರೆಗೆ ಬನಿಹಾಲ್ ಪಾಸ್ ಕಣಿವೆ ಮೂಲಕ ಇದೆ. ಮನಾಲಿ ಮತ್ತು ಲೇಹ್‍ಗಳ ನಡುವೆ ವ್ಯಾಪಾರ ವಹಿವಾಟು ನಡೆಯುವ ರಸ್ತೆ ಇದು. ಆದರೆ ಇವೆಲ್ಲಾ ಪಾಕಿಸ್ತಾನಕ್ಕೆ ಸೇರಿದೆ. ಈ ಭೌಗೋಳಿಕ ಕಾರಣಗಳನ್ನೊಡ್ಡಿ ಪಾಕಿಸ್ತಾನ "ಆಪರೇಷò ಗುಲ್ಮಾರ್ಗ್" ನಡೆಸಿ ಕಾಶ್ಮೀರವನ್ನು ಕಬಳಿಸಲು ಪ್ರಯತ್ನಿಸಿತು.

ಆಪರೇಷನ್ ಗುಲ್ಮಾರ್ಗ್(ಪಾಕಿಸ್ತಾನ)

ಮಹಾರಾಜಾ ಹರಿಸಿಂಗ್ ವಿರುದ್ಧ ದಂಗೆ ಎಬ್ಬಿಸಿ ಅದನ್ನೇ ನೆಪ ಒಡ್ಡಿ ಬಲಹೀನನಾಗಿದ್ದ ಅವರಿಂದ ಉತ್ತರದ ಪ್ರದೇಶಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು.

ಕಾಶ್ಮೀರ ಕಣವೆಯೊಳಕ್ಕೂ ಜಮ್ಮುವಿನೊಳಕ್ಕೂ ನುಗ್ಗಿ ವೇಷ ಮರೆಸಿಕೊಂಡು ಗುಡ್ಡಗಾಡು ಜನರಂತೆ ಓಡಾಡುತ್ತ. ರಜೆಯ ಮೇಲಿದ್ದ ಪಾಕಿಸ್ತಾನಿ ಸೈನಿಕರಿಂದ ತೊಂದರೆಗೊಳಗಾಗಿದ್ದ ಗಡಿಜನರನ್ನು ವಾಯುವ್ಯ ಗಡಿಯ ಗಿರಿಜನರನ್ನು ಕಲೆಹಾಕಿ ಸಣ್ಣತುಕಡಿಗಳನ್ನಾಗಿ ಮಾಡುವುದು.

ಗುಡ್ಡಗಾಡು ಲಷ್ಕರಿಗಳಿಗೆ ಶಸ್ತ್ರಾಸ್ತ್ರ ಒದಗಿಸುವುದು. ಅವರ ಬಂಧುಗಳನ್ನು ಬಿಡಿಸಿಕೊಳ್ಳಲು ಸಹಾಯ ಮಾಡುವುದು ಇತ್ಯಾದಿ ಉಪಾಯಗಳನ್ನು ಬಳಸಲಾಯಿತು.

30-07-1947 ಉತ್ತರ ಭಾಗಗಳನ್ನು ಆಕ್ರಮಿಸಿದ ಪಾಕಿಸ್ತಾನ ಅನೌಪಚಾರಿಕವಾಗಿ ತನ್ನ ಬಾವುಟ ಹಾರಿಸಿತು. ಶ್ರೀನಗರದಿಂದ 50 ಕಿ.ಮೀ. ದೂರದಲ್ಲಿದ್ದ ಬಾರಾಮುಲ್ಲಾದಲ್ಲಿ ಮಹಾರಾಜ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ 80,000 ಯೋಧರು ಒಂದು ವರ್ಷದವರೆಗೆ ಜಮ್ಮುವಿನಲ್ಲಿ ಹೋರಾಡಿ ಮುಖ್ಯ ಪ್ರದೇಶಗಳನ್ನು ಹಿಂದಕ್ಕೆ ತೆಗೆದುಕೊಂಡದು. ಮೇಜರ್ ಸೋಮನಾಥ ಶರ್ಮಾಗೆ ಪರಮವೀರ ಚಕ್ರ, (ಪಿ.ವಿ.ಸಿ.) ಗೌರವಗಳು, ಬ್ರಿಗೇಡಿಯರ್ ಉಸ್ಮಾನ್‍ಗೆ ಮಹಾವೀರ ಚಕ್ರ (ಎಂ.ವಿ.ಸಿ.) ಮರಣಾನಂತರ ದೊರಕಿದವು. 
1948 ಫೆಬ್ರುವರಿ ಪಾಕಿಸ್ತಾನ `ಆಪರೇಷನ್ ಸ್ಲೆಡ್ಜ್ ದಾಳಿ ಆರಂಭಿಸಿತು. ಸಿಂಧು ನದಿಯನ್ನು ದಾಟಲಾಗದಿದ್ದರಿಂದ ಮತ್ತು ವಿಪರೀತ ಚಳಿಯ ದೆಸೆಯಿಂದ ಭಾರತ ಇದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ದಾಳಿಯನ್ನು ಗ್ರೇಟ್ ಹಿಮಾಲಯನ್ ರೇಂಜ್‍ವರೆಗೆ ಮಾತ್ರ ತಡೆಯಲು ಸಾಧ್ಯವಾಯಿತು. ಗುಡ್ಡಗಾಡು ಜನರನ್ನು ಸೈನ್ಯಕ್ಕೆ ಸೇರಿಸಿಕೊಂಡು ಲೇಹ್ ಮಾತ್ರ ಉಳಿಸಿಕೊಳ್ಳಲಾಯಿತು. 1-11-48 ರಂದು ಇಂಡಿಯನ್ ಬ್ರಿಗೇಡ್ ಟ್ರೂಪ್ ಜೋಜಿಲಾ ಮೂಲಕ ಹಿಮಾಲಯ ಶ್ರೇಣಿಯನ್ನು ಭೇದಿಸಿ ಲಡ್ಡಾಕ್‍ನಿಂದ ಆಕ್ರಮಣಕಾರರನ್ನು ಹೊಡೆದೋಡಿಸಿತು. ಸಮುದ್ರಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿ ಟ್ಯಾಂಕ್‍ಗಳನ್ನು ಬಳಸಲಾಯಿತು.
ಕದನ ವಿರಾಮ
	1-1-1949ರಂದು ಕದನವಿರಾಮ ಘೋಷಿಸಲಾಯಿತು. ಚಾಂಬ್‍ನಿಂದ ಲಡಾಕ್ ಬಳಿಯ ಎನ್‍ಜೆ9842 ಬಿಂದುವಿನವರೆಗೆ 700 ಕಿ.ಮೀ. ಉದ್ದದ ಗಡಿಯನ್ನು ಗುರುತಿಸಿ ರಕ್ಷಿಸಿಕೊಂಡು ಬರಲಾಗಿದೆ. "ಪಾಕ್ ಆಕ್ರಮಿತ ಕಾಶ್ಮೀರ" (ಪಿ.ಓ.ಕೆ) ಪ್ರಶ್ನೆಗೆ ತೀರ್ಪುಗಾಣದೆ ಇನ್ನೂ ಪರಿಹಾರವಾಗಿಲ್ಲ(2005).
1961-ಗೋವಾ, ದಯು, ದಾಮನ್
	ಬ್ರಿಟಿಷರೇನೇ ಸುಲಭವಾಗಿ ಬಿಟ್ಟುಕೊಟ್ಟರು. ಆದರೆ ಪೋರ್ಚುಗಿಸರು ಅಲ್ಲ. ಪಶ್ಚಿಮ ಕರಾವಳಿಯ ಗೋವಾ, ದಯು, ದಾಮನ್‍ಗಳನ್ನು 14 ವರ್ಷ ತನ್ನ ವಶದಲ್ಲೇ ಇಟ್ಟುಕೊಂಡಿತ್ತು. ಸಂಧಾನಗಳಿಗೆ ಮಣಿಯದೆ ಇದ್ದಾಗ ಬೇರೆ ದಾರಿ ಕಾಣದೆ ಭಾರತ ತನ್ನ ಸೈನ್ಯ ಬಲವನ್ನು ಪ್ರದರ್ಶಿಸಿತು. ಯಾವ ಯುದ್ಧ ಕಾರ್ಯಾಚರಣೆಯಲ್ಲೂ ನಡೆಯಲಿಲ್ಲ. 18-12-1961 ಪೋರ್ಚುಗೀಸರು ತಾವಾಗಿ ದೇಶಬಿಟ್ಟು ಓಡಿಹೋದರು. 
ಚೀನಾಯುದ್ಧ
	ಯುದ್ಧ ಒಂದು ಕಹಿ ಔಷಧಿ ಇದ್ದ ಹಾಗೆ. ರಾಜತಂತ್ರಗಳನ್ನು ಬಳಸಿ ಆದಷ್ಟು ಯುದ್ಧಗಳನ್ನು ಕಡಿಮೆ ಮಾಡಬೇಕು. 1950ರಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಎಲ್ಲರೂ ಒಪ್ಪಿದ್ದರು. ಆದ್ದರಿಂದ ಪಾಕಿಸ್ತಾನದಷ್ಟು ಅಪಾಯವನ್ನು ಚೀನಾದೇಶದಿಂದ ನಿರೀಕ್ಷಿಸಿರಲಿಲ್ಲ. ಭಾರತ ಚೀನಾ ಸಂಬಂಧಗಳು ಪುರಾತನವೂ ಉತ್ತಮವೂ ಆಗಿದ್ದುವು. ಎರಡೂ ದೇಶಗಳೂ ಸರಿ ಸುಮಾರು ಒಂದೇ ಕಾಲಕ್ಕೆ ಸ್ವಾತಂತ್ರ್ಯ ಪಡೆದಿದ್ದುವು. ಆದರೆ 1-10-1950ರಂದು ಚೀನಾದ `ಪೀಪಲ್ಸ್ ಲಿಬರೇಷನ್ ಆರ್ಮಿ ಟಿಬೆಟ್ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿತು. 1953ರ ವೇಳೆಗೆ ಚೀನಾ ಮಿಲಿಟೆರಿ ದೇಶವಾಗಿತ್ತು. ಧರ್ಮಗುರು ದಲೈಲಾಮಾ ಭಾರತದಲ್ಲಿ ಆಶ್ರಯ ಬಯಸಿದರು. ಆಗ ಎರಡೂ ದೇಶಗಳ ಮೈತ್ರಿ ಏರುಪೇರಾಯಿತು. ಪಾಕಿಸ್ತಾನದ ಜೊತೆ ಅಮೆರಿಕ ಸೈನ್ಯ ಸೇರಿಕೊಂಡದ್ದು ಭಾರತಕ್ಕೆ ಒಳ್ಳೆಯದೆನಿಸಲಿಲ್ಲ. ಸೀಟೋ (ಎಸ್.ಇ.ಎ.ಟಿ.ಒ) ಕರಾರಿನ ಪ್ರಕಾರ ಅಮೆರಿಕ ಪಾಕಿಸ್ತಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿತು.
1962-ಉತ್ತರದಲ್ಲಿ ಯುದ್ಧ
	1962 ಅಕ್ಟೋಬರ್ ಸುಮಾರಿಗೆ ನಮ್ಮ ಸೈನ್ಯ ಕಾರಾಕೋರಂ ಕಣಿವೆಗುಂಟ ಆತ್ಮರಕ್ಷಣೆಗೆ ಅಗತ್ಯವಾದಷ್ಟು ಸಿದ್ಧತೆಯನ್ನು ಹೊಂದಿರಲಿಲ್ಲ. ಸದ್ದಾಕ್‍ನ ಅಕ್ಸಾಯಿಚಿನ್ ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿದ ಚೀನ ಇನ್ನೂ ಹಲವು ಭಾಗಗಳಲ್ಲಿ ಒಳಕ್ಕೆ ನುಸುಳಿ ಬರುವ ಪ್ರಯತ್ನ ಮಾಡಿತು. ಇದರಿಂದ ನಮ್ಮ ಸೈನ್ಯ ಹಿಮ್ಮೆಟ್ಟಬೇಕಾಯಿತು. ಕೆಲವು ಪ್ರದೇಶಗಳಿಗೆ ಮಿಲಿಟೆರಿ ಸರಬರಾಜು ಕೂಡ ಇರಲಿಲ್ಲ. ಬ್ರಿಗೇಡಿಯರ್ ಟಿ.ಎನ್ ರೈನಾ ಸಾಕಷ್ಟು ತಡೆಗಳನ್ನು ಒಡ್ಡಿದರೂ ಫಲಕಾರಿಯಾಗಲಿಲ್ಲ. ಇದರಿಂದ ಈ ಕುರಿತ ಮರುಚಿಂತನೆ ಅಗತ್ಯವಾಯಿತು.
6000 ಮೀಟರ್ ಎತ್ತರದಲ್ಲಿ ಪರ್ವತ ತುಕಡಿಗಳ ಸ್ಥಾಪನೆ, ಆತ್ಮರಕ್ಷಣೆಯ ಸಲಕರಣೆಗಳು ಅಲ್ಲಿಯ ಹವಾಗುಣಕ್ಕೆ ಹೊಂದಿಕೊಳ್ಳುವ ನೆಲೆ, ತರಬೇತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಯಿತು.
ಸೈನ್ಯಬಲವನ್ನು ದ್ವಿಗುಣಗೊಳಿಸಿದ್ದು ಪರ್ವತಶ್ರೇಣಿಗಳಲ್ಲಿ ಹೋರಾಡಲು ಅನುಕೂಲವಾಗುವಂಥ ಮೂರು ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು.
	ಮುಂದೆ ಆತ್ಮರಕ್ಷಣೆಗೆ ಹೆಚ್ಚು ಗಮನ ಕೊಡಲಾಯಿತು. ಇಂದು ಈ ಪಡೆಗಳು ಸಮರ್ಥವಾಗಿವೆ.
1965-ಪಶ್ಚಿಮದ ಕದನಗಳು
	ಚೆನ್ನಾಗಿ ನುರಿತ 40,000 ಸೈನಿಕರು ಶಸ್ತ್ರಸಜ್ಜಿತರಾಗಿ `ಸಲ್ಲಾವುದ್ದೀನ್ `ಘಸ್ನವಿ ಮುಂತಾಗಿ ಅನೇಕ ಹೆಸರುಗಳಿಂದ ಪಾಕಿಸ್ತಾನ ದಾಳಿ ಮಾಡಿತು. ಆಪರೇಷನ್ ಜಿಬ್ರಾಲ್ಟರ್: ಕಾಶ್ಮೀರಿ ಹಬ್ಬ ಒಂದರಲ್ಲಿ ಸಾಮಾನ್ಯ ಜನರಲ್ಲಿ ದಂಗೆ ಎಬ್ಬಿಸಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಈ ತಂತ್ರ 1947ರ `ಆಪರೇಷನ್ ಗುಲ್ಮಾರ್ಗ್ ನಷ್ಟೇ ಪ್ರಭಾವಶಾಲಿಯಾಗಿತ್ತು. ಮಿಕ್ಕ ಸೈನಿಕರು ಕದನವಿರಾಮ ರೇಖೆಯ ಗುಂಟ ಭಾರತದೊಡನೆ ಸೆಣೆಸುವುದು ಅವರ ಉದ್ದೇಶವಾಗಿತ್ತು. ಅವರು ಅಖ್ನೂರ್-ಜಮ್ಮು ನಡುವೆ ರಸ್ತೆ ಸಂಪರ್ಕ ಕಡಿದು ಹಾಕಿದರು. ಕಛ್‍ನಲ್ಲಿ 8ನೇ ಪದಾತಿದಳ ಮತ್ತು ಪ್ಯಾಟನ್ ಟ್ಯಾಂಕ್‍ಗಳನ್ನು ಬಳಕೆ ಮಾಡಿತು. `ಆಪರೇಷನ್ ಡೆಸರ್ಟ್‍ಹಾಕ್‍ನಲ್ಲಿ ಕಾರ್ಗಿಲ್ ಬಳಿ ಶ್ರೀನಗರ ಲೆಹ್ ರಸ್ತೆಗುಂಟ ಭಾರತದೊಳಕ್ಕೆ ನುಗ್ಗುವುದು. ಇವೆರಡೂ ಕದನವಿರಾಮ ಒಪ್ಪಂದ ಮೂಲಕ ನಿಂತಿತು. ಆಗಸ್ಟ್ 9ರ ಆಕ್ರಮಣ ಫಲಕಾರಿಯಾಗಲಿಲ್ಲ. ಪಾಕಿಸ್ತಾನಕ್ಕೆ ಎರಡು ಆಯ್ಕೆಗಳಿದ್ದವು. 1. ಕದನವಿರಾಮ ರೇಖೆಗುಂಟ ಕಿರುಕುಳ ಮುಂದುವರಿಸುವುದು. 2. ಪಂಜಾಬಿನೊಳಕ್ಕೆ ಸಂಪೂರ್ಣವಾಗಿ ನುಗ್ಗುವುದು. ಪಾಕಿಸ್ತಾನ ಮೊದಲನೆಯದನ್ನು ಆಯ್ಕೆ ಮಾಡಿತು. ಆದರೆ ಭಾರತ ಹಾಜಿಫಿರ್ ಬಲ್ಜ್ (ಪಾಕಿಸ್ತಾನವು ಇದನ್ನು ಬೆಡೋರಿ ಎನ್ನುತ್ತದೆ) ಪ್ರದೇಶದಿಂದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿತು. 1-9-1945 ರ "ಆಪರೇಷನ್ ಗ್ರ್ಯಾಂಡ್ ಸ್ಲ್ಯಾಂ" ನಲ್ಲಿ ಆಕ್ರಮಣದಲ್ಲಿ ಪಾಕ್‍ಸೈನ್ಯ ಛಾಂಬ್ ಮತ್ತು ದೇವ ಮೇಲೆ ದಾಳಿ ಇಟ್ಟಿತು. ಭಾರತ ಪೂರ್ಣ ಪ್ರಮಾಣದ ತಡೆ ಒಡ್ಡಿತು. ಆದರೂ ಪಾಕಿಸ್ತಾನಕ್ಕೇ ಜಯವಾಯಿತು. ಅವರ ಕಡೆ ಅನೇಕ ಸಾವು ನೋವುಗಳುಂಟಾದುವು.
ಭಾರತ ಸೈನ್ಯದ ಪುನರ್ರಚನೆ
	ಪಂಜಾಬ್ ಪಡೆಗಳನ್ನು ಬಳಸಿ ಆಕ್ರಮಣಕಾರರನ್ನು ಹುಡುಕುವ ಕೆಲಸ ಪ್ರಾರಂಭವಾಯಿತು. ಬಾಂಗ್ಲಾ ದೇಶದ ಕಡೆಯಿಂದ ಆಕ್ರಮಣಗಳು ಇರಲಿಲ್ಲ. 11ನೇ ಪದಾತಿದಳ ಮೂರು ದಿಕ್ಕಿನ ಆಕ್ರಮಣಗಳನ್ನು ರೂಪಿಸಿತು. ಒಂದು ಡಿವಿಜನ್‍ಗೆ 70 ಕಿ.ಮೀ. ಯುದ್ಧಭೂಮಿಯಂತೆ ಲಾಹೋರ್‍ನ ಇಚ್ಚೋಗಿ ಕಾಲುವೆ ಬಳಿ 5ನೇ ಸೆಪ್ಟೆಂಬರ್ ಕಾರ್ಯಾಚರಣೆ ರೂಪಿಸಿತು. 8ನೇ ಸೆಪ್ಟೆಂಬರ್ ಒಂದು ಕೋರ್ 35 ಕಿ.ಮೀ. ಮುನ್ನುಗಿತು. 1 ಆಮ್ರ್ಡ್ ಡಿವಿಜò ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಿಂದ ಪಾಕಿಸ್ತಾನ ಹಿಮ್ಮೆಟ್ಟಿತು. ಆದರೆ ಅದೇ ದಿನ ಪಂಜಾಬಿಗೆ ನುಗ್ಗಿ, ಬಿಯಾಸ್ ಸಟ್ಲೆಜ್ ಗಡಿಯ ಉತ್ತರಕ್ಕೆ ತಡೆಒಡ್ಡುವುದಾಗಿತ್ತು. 8-11 ವರೆಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಹೆಚ್ಚು ಸಾವು ನೋವು ಅನುಭವಿಸಿತು. 1ನೇ ಆಮ್ರ್ಡ್ ಡಿವಿಜನ್, 17ನೇ ಪೂನಾ ಹಾರ್ಸ್ ಮತ್ತು 16ನೇ ಅಶ್ವದಳ 6ನೇ ಬಂದೂಕುದಳ ಸೇರಿ 11 ಸೆಪ್ಟೆಂಬರ್ ಪಾಕಿಸ್ತಾನದ ಒಂದು ಡಿವಿಜನ್ ಅನ್ನು ಚಿಂದಿ ಚಿಂದಿಯಾಗಿ ಉಡಾಯಿಸಿತು. ಪಾಕಿಸ್ತಾನದ ಜೊತೆ 22 ದಿನಗಳ ಟ್ಯಾಂಕ್ ಕಾಳಗ ನಡೆಯಿತು. ಪಾಕಿಸ್ತಾನ ಸೋತು, ಭಾರತ, ಕಾಶ್ಮೀರ ಕಣಿವೆಯನ್ನು ತನ್ನ ಹತೋಟಿಗೆ ತೆಗೆದುಕೊಂಡಿತು.
ಯುದ್ಧವಿರಾಮ
	23-09-1965 ಯುದ್ಧವಿರಾಮ ಘೋಷಿಸಲಾಯಿತು. 2-12-1965 ಗಡಿಭದ್ರತಾಪಡೆ (ಬಾರ್ಡರ್ ಸೆಕ್ಯೂರಿಟಿ ಫೋರ್ಸ್) ಸ್ಥಾಪನೆಯಾಯಿತು. ಡಿಸೆಂಬರ್ 6 ಅನ್ನು ಪಾಕಿಸ್ತಾನ `ಆತ್ಮರಕ್ಷಣೆಯ ದಿನವೆಂದು ಆಚರಿಸುತ್ತದೆ. ಫೀಲ್ಡ್ ಮಾರ್ಷಲ್ ಅಯೂಬ್‍ಖಾನ್ ಮತ್ತು ಜನರಲ್ ಮೂಸಾ ನುಸುಳಿಬರುತ್ತಿದ್ದ ಮುಜಾಹಿದ್‍ಗಳನ್ನೂ ಕಮಾಂಡೋಗಳನ್ನು ಉತ್ತೇಜಿಸಿದರು. ಪಂಜಾಬಿನ, ಕಾಶ್ಮೀರದ ರೈತರುಗಳೂ ಅವರಿಗೆ ಪ್ರತಿರೋಧ ವ್ಯಕ್ತಪಡಿಸಿದರು. ಹೀಗಾಗಿ ಪಾಕಿಸ್ತಾನದ ಅಪರೇಷನ್ ಜಿಬ್ರಾಲ್ಟರ್ ಅನಾಥವಾಯಿತು. ಇಬ್ಬರೂ ಕೆಲಸ ಕಳೆದುಕೊಂಡರು. ರಷ್ಯಾ ಮಧ್ಯಸ್ಥಿಕೆಯಿಂದ ಕದನವಿರಾಮ ಘೋಷಣೆಯಾಯಿತು. ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರು 11-1-1966ರಲ್ಲಿ ತಾಷ್ಕೆಂಟ್‍ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಅಕಸ್ಮಾತ್ತಾಗಿ ಅವರು ಹೃದಯಾಘಾತದಿಂದ ಅಲ್ಲೇ ನಿಧನರಾದರು. 
	ಚೀನಾ ತನ್ನ ಸೇನೆಗಳನ್ನು ಮುನ್ನುಗ್ಗಿಸುತ್ತ ಅಪಪ್ರಚಾರ ಕೈಗೊಂಡಿತು. ಅಮೆರಿಕ ಪಾಕಿಸ್ತಾನಕ್ಕೆ ನೈತಿಕ ಬಲದ ಜೊತೆಗೆ ಶಸ್ತ್ರಾಸ್ತ್ರಗಳನ್ನೂ ಪೂರೈಸಿತು.
ಬಾಂಗ್ಲಾ ದೇಶ ಅಸ್ತಿತ್ವಕ್ಕೆ-1971
	ಪೂರ್ವ ಪಾಕಿಸ್ತಾನದ ಜನತೆ ಸ್ವಾತಂತ್ರ್ಯ ಬಯಸಿದರು. 1970ರ ಅವಾಮೀ ಲೀಗ್‍ನ ಷೇಕ್ ಮುಜಿಬುರ್ ರೆಹಮಾನ್ ಪ್ರಚಂಡ ಬಹುಮತದಿಂದ ಗೆದ್ದುಬಂದರು. ಇದರಿಂದ ಕಂಗಾಲಾದ ಪಾಕಿಸ್ತಾನ ಭಯೋತ್ಪಾದನೆಯನ್ನು ಹುಟ್ಟು ಹಾಕಿತು. ಲಕ್ಷಗಟ್ಟಲೆ ಬಂಗಾಳಿ (ಬಾಂಗ್ಲಾ) ನಿರಾಶ್ರಿತರು ತ್ರಿಪುರ, ಅಸ್ಸಾಂ ಮತ್ತು ಬಂಗಾಳ ಗಡಿಗಳನ್ನು ದಾಟಿ ಭಾರತದೊಳಕ್ಕೆ ಓಡಿಬಂದರು. ಜನಸಂಖ್ಯೆಯ ಏರುಪೇರಿನಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಸಮಾಧಾನ ಮಾತುಕತೆ, ರಾಜಕೀಯ ಒತ್ತಡಗಳನ್ನು ಪದೇ ಪದೇ ಹೇರಿದರೂ ಮಣಿಯದೆ ಹೋದಾಗ 1971ರ ಯುದ್ಧ ಅನಿವಾರ್ಯವಾಯಿತು. ಯಾವುದೇ ಕಾರಣಕ್ಕೂ ಚೀನೀಯರು ಒಳನುಸುಳದಂತೆ ತಡೆಹಿಡಿಯಲಾಯಿತು. ವ್ಯೂಹಗಳನ್ನು ರಚಿಸಿ ಫಲಕಾರಿಯಾದ ಕಾರ್ಯತಂತ್ರಗಳನ್ನು ಬಳಸಲಾಯಿತು.
ಪೂರ್ವದ ವೃತ್ತಾಂತ
	ಪೂರ್ವ ಪಶ್ಚಿಮ ಪಾಕಿಸ್ತಾನಗಳ ಮಧ್ಯೆ 1600 ಕಿ.ಮೀ. ಅಗಲದ ಭಾರತದ ಪ್ರದೇಶವಿತ್ತು. ದಿ|| ಶ್ರೀಮತಿ ಇಂದಿರಾ ಗಾಂಧಿ ಯವರ ನಾಯಕತ್ವದಲ್ಲಿ ಪೂರ್ವದಲ್ಲಿ ಮೀಸಲು ಪಡೆಯಿಂದ ಆಕ್ರಮಣವನ್ನೂ ಪಶ್ಚಿಮದಲ್ಲಿ ಆತ್ಮರಕ್ಷಣೆಯ ಧೋರಣೆಯನ್ನೂ ರೂಪಿಸಿ ಚೀನೀಯರನ್ನು ರಾಜತಾಂತ್ರಿಕವಾಗಿ ತಡೆ ಹಿಡಿಯಲಾಯಿತು. ಸೈನ್ಯಕಾರ್ಯಾಚರಣೆಯ ರೂವಾರಿ ಜನರಲ್ ಎಸ್‍ಎಚ್‍ಎಫ್‍ಜೆ ಮಾಣೆಕ್ ಷಾ. 3-12-1971 ಪಾಕಿಸ್ತಾನ ಪೂರ್ವ ಪಶ್ಚಿಮ ಭಾರತದ ವಾಯು ನೆಲೆಗಳ ಮೇಲೆ ಬಾಂಬ್ ಹಾಕಿ ಯುದ್ಧ ಸಾರಿತು. ಭಾರತದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಯಿತು. ಭಾರತೀಯ ವಾಯುಪಡೆ ಪಾಕಿಸ್ತಾನವನ್ನು ಸಮರ್ಥವಾಗಿ 72 ಗಂಟೆಗಳ ಕಾಲ ಎದುರಿಸಿತು. ಭಾರತ ನೌಕಾದಳ ಪಾಕಿಸ್ತಾನದಿಂದ ಯಾವುದೇ ಯುದ್ಧ ಸಾಮಗ್ರಿಗಳೂ ಸಮುದ್ರದ ಮೂಲಕ ಬರದಂತೆ ತಡೆಯೊಡ್ಡಿತು. ಪಾಕಿಸ್ತಾನದ ಬಂದರುಗಳ ಮೇಲೆ ನಿರ್ಬಂಧ ಹೇರಿತು. ಬರುತ್ತಿದ್ದ ಅಮೆರಿಕದ ಯೂಎಸ್ ಸೆವೆನ್ತ್ ಫ್ಲೀಟ್‍ಅನ್ನು ತಡೆಹಿಡಿಯಲಾಯಿತು. 16-12-1971ರಂದು ಜನರಲ್ ಎಎಕೆ ನಿಯಾಜ್ ಶರಣಾದರು. ಅಮೆರಿಕ ಸೇನೆ ಬಂಗಾಳ ಕೊಲ್ಲಿಯಿಂದ ಹಿಂದಿರುಗಿತು.
	ಅನೇಕ ನದಿಗಳನ್ನು ಹೆಲಿಕಾಪ್ಟರ್ ಬಳಸಿ ದಾಟಲಾಯಿತು. ರಾಜಕೀಯ ಗುರಿ ಮತ್ತು ಮಿಲಿಟೆರಿ ಸೈನ್ಯ ಬಲ ಎರಡೂ 1971ರ ಯುದ್ಧದಲ್ಲಿ ಕೌಶಲ್ಯದಿಂದ ಮೆರೆದವು. 1965ರ ಯುದ್ಧದಿಂದ ಕಲಿತ ಎಲ್ಲ ಪಾಠವನ್ನೂ 1971ರಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಯಿತು.
ಪಶ್ಚಿಮದ ವೃತ್ತಾಂತ
	ಆತ್ಮರಕ್ಷಣೆಗಷ್ಟೇ ಸೀಮಿತವಾಗಿದ್ದುಕೊಂಡು, ತನ್ನ ಅರೆಬರೆ ಸೈನ್ಯವನ್ನು ಮತ್ತೆ ಕಟ್ಟುವುದು, ಪಾಕಿಸ್ತಾನದ ವ್ಯೂಹಗಳನ್ನು ಭೇದಿಸುವುದು, ಅವರ ಆಯಕಟ್ಟು ಪ್ರದೇಶಗಳನ್ನು ನಿಷ್ಕ್ರಿಯಗೊಳಿಸುವುದು ಭಾರತಸೇನೆಯ ಕೆಲಸವಾಗಿತ್ತು. ವಿಶ್ವಸಂಸ್ಥೆಯಲ್ಲಿ, ಇತರ ರಾಷ್ಟ್ರಗಳಲ್ಲಿ ಕಾಶ್ಮೀರ ಒಂದು ದೊಡ್ಡ ಚರ್ಚೆಯ ವಿಷಯವಾಗಿತ್ತು. ಜನರಲ್ ಆಫೀಸರ್-ಇನ್-ಕಮಾಂಡಿಂಗ್‍ಗೆ ಹೀಗೆ ಅನೇಕ ಜವಾಬ್ದಾರಿಗಳಿದ್ದುವು. ಅತ್ಯುನ್ನತ ಪ್ರದೇಶದಲ್ಲಿ 1600 ಕಿ.ಮೀ. ಗಡಿಯನ್ನು ಅರೆ ಮರುಭೂಮಿ ಮತ್ತು ಪರ್ವತಗಳಲ್ಲಿ ಕಾಯಬೇಕಾಗಿತ್ತು. ಬಾಂಬ್ ದಾಳಿಯಲ್ಲಿ ನಮ್ಮ ಒಂದು ಬ್ರಿಗೇಡ್ ಹಿಂದಕ್ಕೆ ಸರಿಯಬೇಕಾಯಿತು. ಆದರೆ ಬಸಂತರ್ ನದಿಯಲ್ಲಿ ಭಾರತದ 17 ಪೂನಾಹಾರ್ಸ್, 4 ಹೊಡ್ಸನ್ ಹಾರ್ಸ್‍ಗಳು ಪಾಕಿಸ್ತಾನದ 8 ಆಮ್ರ್ಡ್ ಬ್ರಿಗೇಡುಗಳನ್ನು ನಿಂತಲ್ಲಿಯೇ ನಿಲ್ಲಿಸಿದುವು.
	ಡಿಸೆಂಬರ್ 13, ಎರಡು ಭಾರತದ ಕೋರ್‍ಗಳೂ 50 ಸ್ವತಂತ್ರ ಬ್ರಿಗೇಡ್‍ಗಳೂ ಪಂಜಾಬಿನ ಸಟ್ಲೆಜ್‍ಗೆ ದಕ್ಷಿಣದಲ್ಲಿ ಸಜ್ಜಾದುವು. ಹೀಗೆ 1971ರ ಇಂಡೋ ಪಾಕ್ ಯುದ್ಧಾ ನಂತರ ಭಾರತ ಸೈನ್ಯ ಸಾಕಷ್ಟು ಬಲಗೊಂಡಿತು.
ಶಾಂತಿ ಪಾಲನೆ
	ವಿಶ್ವದೃಷ್ಟಿಕೋನದಲ್ಲಿ ಭಾರತದ ಶಾಂತಿಮಂತ್ರವು ಬಲು ಪ್ರಬಲವಾದ ಒಂದು ಧ್ವನಿಯಾಗಿದೆ.ಭಾರತದ ನೀತಿಗಳಲ್ಲಿ ಮುಖ್ಯವಾದವು.
ಶಾಂತಿ ಸ್ಥಾಪನೆಗೆ ಮೊದಲು ಅಂತರಿಕ ಅಶಾಂತಿಯನ್ನು ಶಾಂತಿಯುತ ಮಾರ್ಗಗಳಿಂದ ಬಗೆಹರಿಸಿಕೊಳ್ಳಬೇಕು.
ವಿಶ್ವಸಂಸ್ಥೆಯ ಪ್ರಣಾಳಿಕೆ ಪ್ರಕಾರ ಇತರ ದೇಶಗಳ ಅಂತರಿಕ ವ್ಯವಹಾರಗಳಲ್ಲಿ ತಲೆಹಾಕದಿರುವುದು ಮತ್ತು ಆ ದೇಶಗಳ ಸ್ಥಾನಮಾನಗಳನ್ನು ಗೌರವಿಸುವುದು.
ಬಾಧಿಸಲ್ಪಟ್ಟ ರಾಷ್ಟ್ರಗಳು ಕೋರಿದರೆ ಮಾತ್ರ ಶಾಂತಿ ಸ್ಥಾಪನೆಯ ಕಾರ್ಯ ಸಂಯುಕ್ತ ರಾಷ್ಟ್ರಗಳ ಅಧೀನದಲ್ಲಿ ನಡೆಯಬೇಕು.
ಅದಕ್ಕೆ ಬೇಕಾದ ಸಂಪನ್ಮೂಲವನ್ನು ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಹಣದಿಂದ ತೆಗೆಯಬಾರದು.
ಶಾಂತಿಸೇನೆಯನ್ನು ಹಿಂತೆಗೆದುಕೊಳ್ಳುವಾಗ ವಿಳಂಬವಾಗಬಾರದು.
ಶಾಂತಿಸ್ಥಾಪನೆಗೂ ನೇರಯುದ್ಧಕ್ಕೂ ಮಧ್ಯೆ ಸ್ಪಷ್ಟ ವ್ಯತ್ಯಾಸವಿರಬೇಕು.
 ನಿರ್ದಿಷ್ಟ ಗುರಿಗಳನ್ನು ಸಾಧಿಸುವ ಸಲುವಾಗಿ ಸಮಯವನ್ನು ನಿಗದಿಪಡಿಸಬೇಕು. ಇದು ಸತ್ಯಾಂಶಗಳ ಮೇಲೆ ಆಧರಿಸಿರಬೇಕು.
ಭಾರತೀಯ ಸೈನ್ಯದ ದಕ್ಷತೆ ಬಗ್ಗೆ ಎಲ್ಲ ರಾಷ್ಟ್ರಗಳ ಮನ್ನಣೆಯೂ ದೊರಕಿದೆ. ಶಾಂತಿಸೇನೆಗಳ ಪೈಕಿ 4 ಖಂಡಗಳಲ್ಲಿ ಭೂಸೈನ್ಯ ಭಾಗವಹಿಸಿದೆ. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬಹಳಕಾಲದವರೆಗೆ ಇದ್ದು ನಮ್ಮ ಸೈನ್ಯ ಶಾಂತಿ ಕಾಪಾಡಿದೆ. ಶಾಂತಿಸೇನೆಯಲ್ಲಿ ಭಾಗವಹಿಸುವ ರಾಷ್ಟ್ರಗಳು ತಮ್ಮ ಮಿಲಿಟೆರಿ ತಂತ್ರಜ್ಞಾನದ ಜೊತೆಗೆ ರಾಜನೈತಿಕ ಒಪ್ಪಿಗೆಯನ್ನೂ ಕೊಡಬೇಕು. ಮೊದಲು ಕೊರಿಯಾಗೆ 1953-54ರಲ್ಲಿ ಜ|| ಕೆ.ಎಸ್.ತಿಮ್ಮಯ್ಯ ಕಮೀಷನ್ನಿನ ನಾಯಕತ್ವ ವಹಿಸಿದ್ದರು. ಯುದ್ಧಕೈದಿಗಳನ್ನು ಹಿಂತಿರುಗಿಸುವ ಸೂಕ್ಷ್ಮ ಕೆಲಸ ಅದಾಗಿತ್ತು. ಅನಂತರ ಇಸ್ರೇಲ್ ಈಜಿಪ್ಟ್ ಸೇನೆಗಳನ್ನು ದೂರ ದೂರ ಇಡುವ ಕೆಲಸ. ಆಗ ದೊಡ್ಡ ಪ್ರಮಾಣದ ಸೈನ್ಯ ಬಹಳ ದಿನ ಕೆಲಸಮಾಡಿತು. 1965ರಲ್ಲಿ ಕಾಂಗೋದಲ್ಲಿ ಸ್ಥಾಪನೆ. ಈ ಸಂದರ್ಭದಲ್ಲಿ ಎದುರು ಪಕ್ಷಗಳೇ ಲಿಖಿತ ರೂಪದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದುವು.
ಸಿರಿಯ, ರ್ವಾಂಡಾ, ಲೆಬನಾನ್, ಇಥಿಯೋಪಿಯ, ಕಾಂಬೋಡಿಯಾ ದೇಶಗಳಿಗೂ ಭಾರತ ತನ್ನ ಇಂಜಿನಿಯರ್ಸ್, ವೈದ್ಯರು, ವೀಕ್ಷಕರು ಮತ್ತು ಇತರ ಸೇವೆಗಳನ್ನು ಕಳುಹಿಸಿಕೊಟ್ಟಿದೆ. 1950-52ರ ಕೊರಿಯಾ, 1960-63ರಲ್ಲಿ ಕಾಂಗೊ, ನಂತರ ಸೊಮಾಲಿಯ. ಜ|| ತಿಮ್ಮಯ್ಯನವರ ನೇತೃತ್ವದಲ್ಲಿ ಕೊರಿಯಾ, ಸೈಪ್ರಸ್, ಪ್ರೇಂಚಂದ್ ಅವರು ಸೈಪ್ರಸ್, ನಮೀಬಿಯ, ಜ|| ಸತೀಶ್ ನಂಬಿಯಾರ್ ಯುಗೋಸ್ಲಾವಿಯಾಗಳಿಗೆ ಹೋಗಿ ಬಂದಿದ್ದಾರೆ.
1987ರ ಮಧ್ಯಭಾಗದಲ್ಲಿ ಶ್ರೀಲಂಕಾದಲ್ಲಿ ಶಾಂತಿಸ್ಥಾಪನೆಗಾಗಿ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಎಲ್.ಟಿ.ಟಿ.ಇ. (ಲಿಬರೇಷನ್ ಟೈಗರ್ಸ್ ಆಫ್ó ತಮಿಳ್ ಈಲಂ) ಬಹುದೊಡ್ಡ ಭಯೋತ್ಪಾದಕ ಶಕ್ತಿಯಾಗಿತ್ತು. ಭಾರತೀಯ ಶಾಂತಿ ಪಾಲನಾ ಪಡೆ, (ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್) ಜಾಫ್ನಾನಗರವನ್ನು ಅವರ ಹಿಡಿತದಿಂದ ಪಾರುಮಾಡಲು ಸೆಣಸಾಡಬೇಕಾಯಿತು. ಐತಿಕೆನಿಫ್ ಸ್ಥಳೀಯ ದಂಗೆಗಳನ್ನು ಹತ್ತಿಕ್ಕುವುದು ಮತ್ತು ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕೆಲಸ ಮಾಡಿತು. ಆದ್ದರಿಂದ ಅಲ್ಲಿ ಅನಾದಿ ಕಾಲದ ಅನಾಗರಿಕ ಅವೈಜ್ಞಾನಿಕ ರೀತಿಯಲ್ಲಿ ಕಡಿಮೆ ಜಾಗದಲ್ಲಿ ಯುದ್ಧಗಳಾದುವು. ಬೆಟ್ಟಗುಡ್ಡಗಳೂ ಅನೇಕ ಹಳ್ಳಿಗಳು, ಕುರುಚಲು ಗಿಡಗಳ ಪೊದೆಗಳಿಂದ ಕೂಡಿದ ಇಕ್ಕಟ್ಟಾದ ಸ್ಥಳಗಳಲ್ಲಿ ಕಾಲ್ದಳ, ಇಂಜಿನಿಯರ್ಸ್, ವಿಶೇಷ ದಳಗಳು ಕೂಡಿಕೊಂಡು ರಾಜಕೀಯವಾಗಿಯೂ ಒತ್ತಡಗಳನ್ನು ಹೇರಿತು. ಈ ತಂತ್ರ ಫಲಿಸಿತು. 24-3-1990 ಭಾರತೀಯ ಶಾಂತ ಪಾಲನಾ ಪಡೆ ಸಂಪೂರ್ಣವಾಗಿ ಹಿಂದಕ್ಕೆ ಸರಿಯಿತು.
3 ನವೆಂಬರ್ 1988ರಂದು ಮಾಲ್ಡೀವ್ ಅಧ್ಯಕ್ಷರು ಸ್ಥಳೀಯ ದಂಗೆಯನ್ನು ಹತ್ತಿಕ್ಕಲು ಭಾರತದ ಪ್ಯಾರಾಷೂಟ್ ಬ್ರಿಗೇಡ್‍ನ ನೆರವು ಪಡೆದರು. ಇದು ಭಾರತದಿಂದ 250 ಕಿ.ಮೀ. ದೂರದಲ್ಲಿ ನಡೆಯಿತು. 50 ವರ್ಷಗಳಲ್ಲಿ 29 ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯನ್ನು 50 ಸಾವಿರಕ್ಕೂ ಹೆಚ್ಚು ಭಾರತೀಯರು ಪ್ರಾಣವನ್ನು ಲೆಕ್ಕಿಸದೆ ವಿವಿಧ ರೂಪಗಳಲ್ಲಿ ಸಹಾಯ ಮಾಡಿದ್ದಾರೆ.
ಪದಕಗಳು
	ಪರಮವೀರ ಚಕ್ರ 1		ಕ್ಯಾ|| ಜಿ.ಎಸ್. ಸಲಾಹಿಯಾ (ಕಾಂಗೋ)
	ಮಹಾವೀರ ಚಕ್ರ 5		ಲೆ|| ರಂಗರಾಜನ್, ವಿ.ಪಿ.ತ್ರೇಹಾಸ್, ಎò.ಬಿ. ಬ್ಯಾನರ್ಜಿ
					ನಾಯಕ್, ಎಂ.ಥಾಪಾ, ನಾಯಕ್ ಆರ್ ಗುರುಂಗ್
	ಕೀರ್ತಿ ಚಕ್ರ  1			ಸುಬೇದಾರ್ ರಾವಲ್‍ಸಿಂಗ್
	ವೀರ ಚಕ್ರ  19			(ಸ್ಥಳಾಭಾವದಿಂದ ವಿವರಗಳು ಸಾಧ್ಯವಿಲ್ಲ)
	ಶೌರ್ಯ ಚಕ್ರ  3			ಕ್ಯಾ|| ಪ್ರದೀಪ್ ಭಾಟಿಯಾ, ಸು|| ಗಂಗಾರಾಮ್, ಸಿಪಾಯಿ ದೇವೇಂದ್ರಚಂದ್
ಯುದ್ಧ ಸೇವಾ ಪದಕ  4			ಬ್ರಿ|| ರಣಧೀರ್ ಕುಮಾರ್ ಮೆಹ್ತಾ, ಬಹುಗುಣ, ಆರ್.ಪಿ. ಪೂನಿಯಾ, 
					ಹರೀಂದರ್ ಪಾಲ್.
	ಸೇನಾಪದಕ  10			(ಸ್ಥಳಾಭಾವದಿಂದ ವಿವರಗಳು ಸಾಧ್ಯವಿಲ್ಲ)
  ವಿಶಿಷ್ಟ ಸೇವಾಪದಕ   1			ಮೇ|| ಸಂಜಯ್‍ಕುಮಾರ್‍ಸಿಂಗ್
	 ಪ್ರಶಸ್ತಿ ಪತ್ರ   1			ಪ್ಯಾರಾಫೀಲ್ಡ್ ಆಂಬ್ಯುಲೆನ್ಸ್
ಯು.ಎನ್. ಫೋರ್ಸ್ ಪತ್ರ 2		ಸಂಪತ್ ಪಿಳ್ಳೆ, ವಿನೋದ್ ಪಿಳ್ಳೆ

ಮುಖ್ಯ ಶಾಂತಿ ಸ್ಥಾಪಕರು	
ಜ|| ಕೆ ಎಸ್ ತಿಮ್ಮಯ್ಯ
ಮೇ|| ಜ|| ಎಸ್ ಪಿ ಪಿ ಥೋರಟ್
	ಮೇ|| ಜ|| ಪಿ ಎಸ್ ಗ್ಯಾನಿ
	ಮೇ|| ಜ|| ಕೆ ಪಿ ಧರಗಲ್‍ಕರ್
	ಮೇ|| ಜ|| ಐ ಜೆ ರಿಖ್ಯೆ
	ಲೆ|| ಜ|| ದೇವನ್ ಪ್ರೇಂಚಂದ್
	ಬ್ರಿ|| ಆರ್ ಎಸ್ ನೊರ್ಹೋನ
	ಬ್ರಿ|| ಕೆ ಎಸ್ ಎಸ್ ರಾಜಾ
	ಲೆ|| ಜ|| ಸತೀಶ್ ನಂಬಿಯಾರ್
	ಬ್ರಿ|| ವಿ ಎಂ ಪಾಟೀಲ್
	ಬ್ರಿ|| ಎಂ ಪಿ ಭಗತ್
	ಬ್ರಿ|| ಕೆ ಎಸ್ ಶಿವಕುಮಾರ್ 
	ಬ್ರಿ|| ಎಸ್ ಸಿ ಜೋಷಿ
	ಮೇ|| ಜ|| ವಿ ಕೆ ಜೈಟ್ಲೆ
	ಮೇ|| ಜ|| ಎಲ್ ಎಂ ತಿವಾರಿ
	ಬ್ರಿ|| ಯು ಎಸ್ ಕ್ಲೈರ್
ಭಾರತದ ಶಾಂತಿ ಪ್ರಕ್ರಿಯೆಗಳು ಒಟ್ಟು 36 (ಜುಲೈ 2002 ವರೆಗೆ) ಇದು ಇನ್ನೂ ಮುಂದುವರೆಯುತ್ತಲೇ ಇದೆ.
ವಿಶಿಷ್ಟ ಸೇವಾ ಪ್ರಶಸ್ತಿಗಳು
1. ಭಾರತ ರತ್ನ 
2. ಪದ್ಮವಿಭೂಷಣ
3. ಪದ್ಮಭೂಷಣ
4. ಪರಮ ವಿಶಿಷ್ಟ ಸೇವಾ ಪದಕ
5. ಪದ್ಮಶ್ರೀ
6. ಸರ್ವೋತ್ತಮ ಯುದ್ಧ ಸೇವಾಪದಕ
7. ಅತಿ ವಿಶಿಷ್ಟ ಸೇವಾ ಪದಕ
8. ಯುದ್ಧ ಸೇವಾಪದಕ
9. ವಿಶಿಷ್ಟ ಸೇವಾಪದಕ
10. 30 ವರ್ಷ ಸೇವೆ ಪದಕ
11. 20 ವರ್ಷಸೇವೆ ಪದಕ
12. 9 ವರ್ಷ ಸೇವೆ ಪದಕ
13. ನೆನಪಿನ ಪದಕ
14. ಹೆಚ್ಚು ಸೇವೆ ಮತ್ತು  ಒಳ್ಳೆಯ ನಡತೆ ಪದಕ
15. ಜನರಲ್ ಸೇವಾ ಪದಕ 
16. ಸಮರ ಸೇವಾ ಪದಕ
17. ಉತ್ತಮ ಯುದ್ಧ ಸೇವಾಪದಕ
18 ಸೈನ್ಯ ಸೇವಾ ಪದಕ
19. ವಿದೇಶ ಸೇವಾ ಪದಕ
20. ಮೆಚ್ಚುಗೆಯ ಪತ್ರ 
21. ರಕ್ಷಾ ಪದಕ
22. ಪೂರ್ವಿ ನಕ್ಷತ್ರ
23. ಪಶ್ಚಿಮಿ ನಕ್ಷತ್ರ
24. ಸಂಗ್ರಾಮ ಪದಕ
25. ಗಾಯಕ್ಕೆ ಪದಕ 
26. 25ನೇ ವಾರ್ಷಿಕೋತ್ಸವ  ಪದಕ

ಕಾಶ್ಮೀರ ಕಣಿವೆಯಲ್ಲಿ ಮುಟ್ಟುಗೋಲು ಹಾಕಿಕೊಂಡ ಆಯುಧಗಳು

ವಿವರ
1991
1992
1993
1994
1995
1996
1997
1998
ಒಟ್ಟು

ಅಸಾಲ್ಟ್ ರೈಫಲ್ಸ್
1442
2421
1650
1623
1872
1266
1108
470
11,852

ಮೆಷೀನ್ ಗನ್
130
128
112
110
92
83
59
24
738

ರಾಕೆಟ್ ಲಾಂಚರ್
79
103
53
45
48
46
90
132
586

ಸ್ನಿಪ್ಟರ್ ರೈಫಲ್
-
05
38
40
45
29
26
8
190

ಮಾರ್ಟರ್ಸ್
-
-
4
3
3
1
6
3
20

ಪಿಸ್ತೂಲು
419
458
533
599
757
583
455
143
3,947

ರೇಡಿಯೋ ಸೆಟ್
24
53
94
156
252
239
189
107
1,114

ಗ್ರೆನೇಡ್ಸ್
1,487
2,063
4,269
2,322
2,379
3,112
3,623
1,059
20,313

ಆಯುಧಗಳು ದಶಲಕ್ಷ
24.5
3.13
4.64
4.16
3.64
2.95
2.12
0.20
23.09

ಮೈನ್‍ಗಳು
152
206
435
1,241
480
336
3,301
368
6,520

ಆಂ್ಯಟಿ ಏರ್‍ಕ್ರಾಫ್ಟ್ ಗನ್ನುಗಳು
-
-
-
-
-
-
1
-
1

ಮಿಸೈಲ್ ಲಾಂಚರ್ಸ್

1
1
2

ಬೆಂಕಿ ಚೆಂಡುಗಳು

9
9

												(ಬಿ.ನಿರಂಜನರಾಮ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ